ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ರೆಬಲ್​ ಸ್ಟಾರ್​ ಅಂಬರೀಶ್​…!

ಬೆಂಗಳೂರು : ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ಕರೆದುಕೊಂಡು ಹೋಗಲಾಗಿದೆ.

ambareesh ಗೆ ಚಿತ್ರದ ಫಲಿತಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಕ್ರಿಕೆಟ್ ಕಪ್ (ಕೆಸಿಸಿ) ಆರಂಭಕ್ಕಾಗಿ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ನಟ ಅಂಬರೀಶ್ ಸೇರಿದಂತೆ ಹಲವು ಸ್ಟಾರ್ ಗಳು, ನಿರ್ಮಾಪಕರು, ಕಲಾವಿದರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಈ ವೇಳೆ ನಟ ಅಂಬರೀಶ್ ಬೆಳಗ್ಗೆಯಿಂದ ಕ್ರೀಡಾಂಗಣದಲ್ಲೇ ಇದ್ದರು, ಆದರೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಸುಸ್ತಾಗಿದ್ದ ಅವರು ಕುಸಿದು ಬಿದ್ದಿದ್ದಾರೆ. ಈ ವೇಳೆ ನಟ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೊಂದಿಗೆ ಅಂಬರೀಶ್ ರನ್ನು ಆಸ್ಪತ್ರೆ ಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಅಂಬರೀಶ್ ಮನೆಗೆ ತೆರಳಿದ್ದಾರೆ.

ambareesh fell down ಗೆ ಚಿತ್ರದ ಫಲಿತಾಂಶ

ಕೊಡಗು ಸಂತ್ರಸ್ತರಿಗೆ ನೆರವಾಗಲು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಸಿಸಿಯನ್ನು ಆರಂಭಿಸಲು ತಯಾರಿ ನಡೆಸಿ ಇಂದು ಪ್ರಾರಂಭವಾದ ಟೂರ್ನಿಯಲ್ಲಿ  ಕ್ರೀಡಾಂಗಣದಲ್ಲಿ ನೆರೆದಿದ್ದ ಸ್ಟಾರ್ ಗಳ ಜೊತೆ ಬೆಳಗ್ಗೆಯಿಂದಲೂ ಅಂಬರೀಶ್ ಅವರು ಉತ್ಸಾಹದಿಂದಲೇ ಮಾತನಾಡುತ್ತಾ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಆದರೆ ಬಿಸಿಲಿನ ತಾಪ ಹೆಚ್ಚಿದ್ದರಿಂದ ಸುಸ್ತಾಗಿದ್ದ ಅಂಬರೀಶ್​ ಚಿಕಿತ್ಸೆ ನೀಡಿ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಯಿತು. ಇನ್ನೂ ಅಭಿಮಾನಿಗಳು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

 

Leave a Reply

Your email address will not be published.