ರಾಜಕೀಯ ಪ್ರವೇಶ : ಊಹಪೋಹಗಳಿಗೆ ತೆರೆ ಎಳೆದ ಯದುವೀರ್ ಒಡೆಯರ್…?

ಹಾಸನ : ‘ರಾಜಕೀಯ ಪ್ರವೇಶ ಸದ್ಯಕ್ಕೆ ಇಲ್ಲ, ರಾಜಕೀಯದಲ್ಲಿ ನನಗೆ ಆಸಕ್ತಿಯೂ ಇಲ್ಲ, ಸದ್ಯ ರಾಜಮನೆತನದ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ ಎಂದು  ಮೊದಲು ಅದನ್ನು ನಿಭಾಯಿಸುತ್ತೇನೆ’ ಅಂತ ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿದರು.

yaduveer entry election ಗೆ ಚಿತ್ರದ ಫಲಿತಾಂಶ

ಹಾಸನದ ಕಲಾಭವನದಲ್ಲಿ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ರಾಜ ಯದುವೀರ್​ ಒಡೆಯರ್, ‘ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆಂಬ ವಿಷಯ ಮಾಧ್ಯಮಗಳಿಂದ ತಿಳಿದಿದೆ. ರಾಜಕೀಯ ಸೇರುವ ವದಂತಿ ಕೇವಲ ಊಹಾಪೋಹ ಅಷ್ಟೇ. ನೆರೆ ಸಂತ್ರಸ್ತ ಮಡಿಕೇರಿಗೆ ಶೀಘ್ರದಲ್ಲೇ ಭೇಟಿ ನೀಡುವೆ. ಜನಸೇವೆ ಮಾಡಲು ರಾಜಕೀಯ ಬಿಟ್ಟು ಬೇರೆ ಬೇರೆ ಕ್ಷೇತ್ರಗಳಿವೆ’ ಎಂದು ತಿಳಿಸಿದ್ರು.

ಮೊದಲ ಬಾರಿಗೆ ಹಾಸನಕ್ಕೆ ಆಗಮಿಸಿದ ಮೈಸೂರು ಮಹಾರಾಜ ಯದುವೀರ್ ಒಡೆಯರ್​ರನ್ನ ಹಾಸನ ಜಿಲ್ಲಾಡಳಿತ ಭವ್ಯ ರೀತಿಯಲ್ಲಿ ಸ್ವಾಗತ ಮಾಡಿತು. ಇನ್ನು ಮಹಾರಾಜರನ್ನು ನೋಡಲು ಜನಸಾಗರವೇ ಮುಗಿದು ಬಿದ್ದಿತ್ತು. ಈ ವೇಳೆ ಯದುವೀರ್​ ರಾಜಕೀಯ ಪ್ರವೇಶದ ಊಹಪೋಹಗಳಿಗೆ

Leave a Reply

Your email address will not be published.

Social Media Auto Publish Powered By : XYZScripts.com