KCC CRICKET : ಚಮಕ್​ ಕೊಟ್ಟು ಫೈನಲ್​ ಹಂತ ತಲುಪಿದ ಗಣೇಶ್​ ತಂಡ..!

ಬೆಂಗಳೂರು : ಸ್ಯಾಂಡಲ್​ವುಡ್​ನ ನಟರ ಕ್ರಿಕೆಟ್ ಕಪ್ ಸರಣಿಯ  ನಾಲ್ಕು ಪಂದ್ಯಗಳು ನೆನ್ನೆ ನಡೆದಿದೆ. ಇವುಗಳಲ್ಲಿ  ಗಣೇಶ್​ ಸಾರಥ್ಯದ ಒಡೆಯರ್​ ಚಾರ್ಜರ್ಸ್​ ತಂಡ ಎರಡೂ ಪಂದ್ಯಗಳನ್ನು ಗೆದ್ದು ಫೈನಲ್ ಹಂತ ತಲುಪಿದೆ.

ಸದ್ಯಕ್ಕೆ ಫೈನಲ್ ಹಂತ ತಲುಪಿದ ಮೊದಲ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಒಡೆಯರ್​ ಜಾರ್ಜರ್ಸ್​ ತಂಡ ಇದಾಗಿದೆ. ಆರಂಭದಲ್ಲಿ ಒಡೆಯರ್ ಚಾರ್ಜರ್ಸ್ ಹಾಗೂ ಸುದೀಪ್​ ತಂಡವಾದ ಕದಂಬ ಲಯನ್ಸ್ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಗಣೇಶ್ ತಂಡ 4 ರನ್ ಗಳ ಅಂತರದಲ್ಲಿ ವಿಜಯ ಸಾಧಿಸಿತು. ಈ ಪಂದ್ಯ ಕೊನೆಯ ಬಾಲ್ ವರೆಗೆ ಕುತೂಹಲ ಮೂಡಿಸಿತ್ತು. ಕೋಟಿಗೊಬ್ಬನಿಗೆ ಗಣೇಶ್​ ಚಮಕ್​ ನೀಡಿ ಜಯಭೇರಿ ಸಾಧಿಸಿದ್ರು.

Kcc cricket tournament : wodeyar chargers enters final

ಇನ್ನು ಮೂರನೇ ಪಂದ್ಯದಲ್ಲಿ ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ಜೊತೆ ಸಮರ ಶುರು ಮಾಡಿ ಗಣೇಶ್​ ತಂಡ ಮತ್ತೆ  ಒಡೆಯರ್​  ಟೀಂ ಗೆದ್ದಿತು. ಎರಡಕ್ಕೆ ಎರಡೂ ಪಂದ್ಯಗಳಲ್ಲಿ ವಿಜಯ ಪತಾಕೆ ಹಾರಿಸಿದ ಒಡೆಯರ್ ಚಾರ್ಜರ್ ನೇರವಾಗಿ ಫೈನಲ್ ಗೆ ಹಂತ ತಲುಪಿತು.

kcc cricket kannada ಗೆ ಚಿತ್ರದ ಫಲಿತಾಂಶ

ನೆನ್ನೆ ನಡೆದ ಟೂರ್ನಿಯಲ್ಲಿ ಗಣೇಶ್​ ತಂಡ 2ಅಂಕ ಗಳಿಸಿ ಜಯಭೇರಿ ಬಾರಿಸಿತು, ಹಾಗೂ ಶಿವಣ್ಣ ತಂಡ ಒಂದು, ಯಶ್ ತಂಡ ಒಂದು ಪಂದ್ಯವನ್ನು ಗೆದ್ದಿದೆ. ಫೈನಲ್ ಪಂದ್ಯ ಇಂದು ರಾತ್ರಿ 8:15 ಕ್ಕೆ ನಡೆಯಲಿದ್ದು ಮೊದಲಿಗೆ ಪುನೀತ್​ ಟೀಂ ಹಾಗೂ ಯಶ್​ ಟೀಂ ಅಖಾಡಕ್ಕೆ ಇಳಿಯಲಿದ್ದು, ಮತ್ತೊಂದು ಉಪೇಂದ್ರ (ಹೊಯ್ಸಳ ಈಗಲ್ಸ್) ಮತ್ತು ಸುದೀಪ್ (ಕದಂಬ ಲಯನ್ಸ್) ಮಧ್ಯೆ ನಡೆಯಲಿದೆ.

Kannada Chalanachitra Cup Season 2 Photos

 

Leave a Reply

Your email address will not be published.

Social Media Auto Publish Powered By : XYZScripts.com