‘Demonetization’ : ಬ್ಲಾಕ್​ ಮನಿ ಅಲ್ಲ ವೈಟ್ ಮನಿ : ಫೈಲ್​ ಆಯ್ತು ಮೋದಿ ತಂತ್ರ…! ​

ಎಲ್ಲ ಕೆಲಸ ಬಿಟ್ಟು 2018ರ ನವೆಂಬರ್ 8ರ ಮಧ್ಯರಾತ್ರಿಯಿಂದ ‘ಕಾಗದದ ತುಣುಕು’ ಆದ 500 ಮತ್ತು ಸಾವಿರ ರೂಪಾಯಿಗಳ
ನೋಟುಗಳನ್ನು ಎಣಿಸುವ ಕಾಯಕವನ್ನು ಆರ್.ಬಿ.ಐ. (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಪೂರ್ಣಗೊಳಿಸಿದೆ. ದೇಶದ
ಮೂಲೆ ಮೂಲೆಗಳಿಂದ ತನ್ನ ಬಳಿ ಬಂದು ಬಿದ್ದ ‘ಕಾಗದದ ತುಂಡು’ಗಳನ್ನು ಎಣಿಸುವುದಕ್ಕಾಗಿ ಅದು ಸರಿಯಾಗಿ ಒಂದು ವರ್ಷ
20 ತಿಂಗಳು 20 ದಿನಗಳನ್ನು ತೆಗೆದುಕೊಂಡಿದೆ. ನಿರುಪಯುಕ್ತ ಕಾಗದದ ತುಣುಕು ಎಣಿಸುವುದಕ್ಕೆ ಆರ್ ಬಿ ಐ ಪಟ್ಟ
ಶ್ರಮ ಅಸಾಧಾರಣ. ಈಗ ಭಾರತದಲ್ಲಿ ಸಾಧಾರಣವಾದದ್ದು ಏನೂ ನಡೆಯುತ್ತಿಲ್ಲ. ಎಲ್ಲವೂ ಅಸಾಧಾರಣ. ಮತ್ತು ಅನನ್ಯ-
ಅಪೂರ್ವ. ರಕ್ಷಣಾ ಇಲಾಖೆಯ ವಿವಾದಕ್ಕೆ ಸಂಬಂಧಿಸಿದಂತೆ ವಿತ್ತ ಅಥವಾ ಹಣಕಾಸು ಸಚಿವರು ಮಾತನಾಡುತ್ತಾರೆ.
ವಿದೇಶಾಂಗ ಸಚಿವರ ಕೆಲಸವನ್ನು ‘ದೇಶ ಸುತ್ತುವ’ ಮೂಲಕ ಸ್ವತಃ ಪ್ರಧಾನಿ/ಪ್ರಧಾನ ಸೇವಕರೇ ಅದನ್ನು ಮಾಡುತ್ತಿದ್ದಾರೆ.
ವಿರೋಧ ಪಕ್ಷ ಅಥವಾ ಪಕ್ಷಗಳು ಆಡಳಿತ ಪಕ್ಷದಂತೆ ಕೆಲಸ ನಿರ್ವಹಿಸುತ್ತಿವೆ. ನಿಜವಾದ ವಿರೋಧ ಪಕ್ಷವಾಗಿ ಇರಬೇಕಾಗಿದ್ದ
ಮಾಧ್ಯಮಗಳು ‘ಮಡಿಲು ಪತ್ರಿಕೋದ್ಯಮ’ದಲ್ಲಿ ನಿರತವಾಗಿವೆ. ಜನಪರ ಹೋರಾಟಗಾರರು, ಲೇಖಕರು, ವಕೀಲರು ‘ನಗರ
ನಕ್ಸಲರಾಗುತ್ತಿದ್ದಾರೆ. ಹಿಂದೆಂದೂ ನಡೆಯದೇ ಇದ್ದ ರೀತಿಯ ವಿದ್ಯಮಾನಗಳಿಗೆ ದೇಶವು ಸಾಕ್ಷಿಯಾಗುತ್ತಿದೆ.

note ban AND NEW NOTE ಗೆ ಚಿತ್ರದ ಫಲಿತಾಂಶ

2016ರ ನವೆಂಬರ್ 8ರ ರಾತ್ರಿ ಎಂಟು ಗಂಟೆಗೆ ಟೆಲಿವಿಷನ್ ಕಿರುತೆರೆಯ ಮೇಲೆ ಕಾಣಿಸಿಕೊಂಡ ದೇಶದ ‘ಚೌಕಿದಾರ’ ಆಗ
ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿಗಳ ನೋಟುಗಳಿಗೆ ಅದೇ ದಿನದ ಮಧ್ಯರಾತ್ರಿಯಿಂದಲೇ ‘ಕಾನೂನು ಮಾನ್ಯತೆ ಇರುವುದಿಲ್ಲ’ ಎಂದು ಘೋಷಿಸಿದರು. ಹಾಗೆ ಮಾಡುವ ಮೂಲಕ ದೇಶದ ಜನ ಸಮೂಹವನ್ನು ಬೆಚ್ಚಿಬೀಳುವಂತೆ
ಮಾಡಿದರು. ಮಾತ್ರವಲ್ಲ ಹಣಕಾಸು ಸಚಿವರೂ ಸೇರಿದಂತೆ ಅವರದೇ ಸಚಿವ ಸಂಪುಟಕ್ಕೂ ಶಾಕ್ ನೀಡಿದರು. ಆಗ ಹೊಡೆದ ಕರೆಂಟ್ ಶಾಕ್ ನಿಂದ ಎಚ್ಚೆತ್ತುಕೊಳ್ಳುವುದಕ್ಕೆ ವಿತ್ತ ಸಚಿವರೂ ಈಗಲೂ ಒದ್ದಾಡುತ್ತಿದ್ದಾರೆ. ಅದಕ್ಕಾಗಿ ಅವರು ಮತ್ತು ಅವರ ಹಣಕಾಸು ಇಲಾಖೆಯ ರಾಜ್ಯ ಸಚಿವರು ‘ಸತ್ಯೋತ್ತರ’ದ ಮೊರೆ ಹೋಗಿದ್ದಾರೆ. ನೋಟು ರದ್ದು ಘೋಷಣೆಯ ಸಂದರ್ಭದಲ್ಲಿ ‘ಕಪ್ಪುಹಣ, ನಕಲಿ ನೋಟು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶ’ದಿಂದ ಈ ಕ್ರಮಕ್ಕೆ ಕೈ ಹಾಕಿರುವುದಾಗಿ ಪ್ರಕಟಿಸಿದ್ದರು.

note ban rbi ಗೆ ಚಿತ್ರದ ಫಲಿತಾಂಶ

ನೋಟು ಅಮಾನ್ಯ ಆದ ಸರಿಯಾಗಿ ನಾಲ್ಕು ದಿನಗಳ ನಂತರ ಜಪಾನ್ ಗೆ ಹೋಗಿದ್ದ ಪ್ರಧಾನ ಸೇವಕರು ಅಲ್ಲಿ ಇರುವ
ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ವಿದೇಶ ಪಯಾಣ ಮಾಡಿದಾಗಲೆಲ್ಲ ಅವರು ಉದ್ದೇಶಿಸಿ ಮಾತನಾಡುವುದು
ಅಲ್ಲಿ ಹೋಗಿ ನೆಲೆಸಿರುವ ಭಾರತೀಯರನ್ನೇ. ನಿಂತ ನೆಲ ಯಾವುದಾದರೇನು? ನಿಂತಷ್ಟು ನೆಲ ಮಾತ್ರ ಭಾರತವಲ್ಲ,
ಎದುರಿಗಿರುವವರೂ ಭಾರತೀಯರೇ ಆಗಿರಬೇಕು ಎಂಬ ಇರಾದೆ ಪ್ರಧಾನಿಯವರದು. ಹಾಗಾದಾಗ ಮಾತ್ರ ಮೊನ್ನೆಯ
ನೆಹರು, ನಿನ್ನೆಯ ಕಾಂಗ್ರೆಸ್ ಬಗ್ಗೆ ಮಾತ್ರ ಮಾತನಾಡಿ ಇಂದು-ನಾಳೆಗಳನ್ನು ಮರೆಮಾಚುವ ಯಶಸ್ವಿ ತಂತ್ರ ರೂಪಿಸಿದ್ದಾರೆ.
ಜಪಾನ್ ನೆಲದಲ್ಲಿ ಮನೆಯಲ್ಲಿ ಹಣವಿಲ್ಲದೇ ‘ಮದುವೆ ಮಾಡುವುದಕ್ಕೆ’ ಪರದಾಡುತ್ತಿರುವ ಭಾರತೀಯರನ್ನು ಗೇಲಿ ಮಾಡಿ
ಮಾತನಾಡಿದರು. ಅವರ ವ್ಯಂಗ್ಯದ ಕ್ರೌರ್ಯ ಎಷ್ಟಿತ್ತೆಂದರೆ ‘ಬಳಿಯಲ್ಲಿ ಹಣದ ಥೈಲಿಯೇ ಇದ್ದರೂ ಅನಾರೋಗ್ಯದಿಂದ ಇರುವ
ತಾಯಿಗೆ ಚಿಕಿತ್ಸೆ ಕೊಡಿಸಲಾಗುತ್ತಿಲ್ಲ’ ಎಂಬ ಮಾತನ್ನೂ ಸೇರಿಸಿದ್ದರು. ಅವರು ಅದಾಗಲೇ ಏನನ್ನಾದರೂ ಮಾತನಾಡಿ
ದಕ್ಕಿಸಿಕೊಳ್ಳುವ ಹಂತ ತಲುಪಿದ್ದರು. ‘ದೇಶಪ್ರೇಮ’ ಮಾರಾಟಕ್ಕೆ ಇರುವ ಒಳ್ಳೆಯ ಸರಕು ಎಂದನ್ನವರು ಮರೆತಿದ್ದರು.

note ban ಗೆ ಚಿತ್ರದ ಫಲಿತಾಂಶ

ಜಪಾನ್ ನಲ್ಲಿ ವ್ಯಂಗ್ಯವಾಗಿ ಮಾತನಾಡಿ ಭಾರತಕ್ಕೆ ಮರಳುವ ವೇಳೆಗಾಗಲೇ ತಾವು ಕೈಕೊಂಡ ಕ್ರಮದ ಕುರಿತ
ಜ್ಞಾನೋದಯ ಆಗಿರಬೇಕು. ಗೋವಾದಲ್ಲಿ ಮಾತನಾಡಿ ’50 ದಿನಗಳ ಗಡುವು ನೀಡುವಂತೆ ಕೋರಿದರು. 50 ದಿನದ ನಂತರ
‘ತಪ್ಪು ಸಾಬೀತಾದರೆ ದೇಶ ನೀಡುವ ಶಿಕ್ಷೆ ಎದುರಿಸುವುದಾಗಿ’ ಭಾವನಾತ್ಮಕ ಬ್ಲಾಕ್ ಮೇಲ್ ಮಾಡಿದರು. ನೋಟ್
ಬಂದಿಯಾದ 22 ದಿನಗಳ ನಂತರ ಕ್ಯಾಸೆಟ್ ಬದಲಿಸಿದ ‘ಸೇವಕರು’ ಕ್ಯಾಷ್ ಲೆಸ್ ಎಕಾನಮಿಯ ಕುರಿತು ಮಾತನಾಡಲು
ಆರಂಭಿಸಿದರು. ನಂತರ ಲೆಸ್ ಕ್ಯಾಷ್ ಎಕಾನಮಿ ಹೀಗೆ ಗೋಲ್ ಕಡೆಗೆ ಚೆಂಡನ್ನು ಒದೆಯುವ/ತಳ್ಳುವ ಬದಲು ಬಾಕ್ಸ್ ನ್ನೇ
ಬದಲಿಸುತ್ತ ಹೋದರು. ಮಧ್ಯದಲ್ಲಿ ಕೆಲಕಾಲ ಜಿಡಿಪಿ ಏರಿಕೆ ಕಂಡಾಗ ಅದರ ಶ್ರೇಯ ಪಡೆಯಲು ಮುಂದಾಗಿ ‘ಹಾರ್ಡ್ ವರ್ಕ್
ಮತ್ತು ಹಾರ್ವರ್ಡ್’ ಎಂಬ ಪದಗಳನ್ನು ಬಳಸಿದರು. ಕೆಲವೇ ದಿನಗಳ ನಂತರ ಮತ್ತೆ ಜಿಡಿಪಿ ಕುಸಿದಾಗ ಮಾಜಿ
ಪ್ರಧಾನಿಯವರಿಗಿಂತ ಹೆಚ್ಚು ಭೀಕರವಾಗಿ-ಕೆಟ್ಟದ್ದಾಗಿ ‘ಮೌನ’ಕ್ಕೆ ಶರಣಾದರು.

note ban ಗೆ ಚಿತ್ರದ ಫಲಿತಾಂಶ

ಜಗತ್ತಿನ ಆರ್ಥಿಕ ತಜ್ಞರನ್ನು ಬೆಚ್ಚಿ ಬೀಳಿಸಿದ ನೋಟು ಅಮಾನ್ಯೀಕರಣದ ಪ್ರಯೋಗಕ್ಕೆ ಭಾರತೀಯ ನಾಗರಿಕರು
ಬಲಿಪಶುಗಳಾದದ್ದು ಈಗ ಗುಟ್ಟೇನಾಗಿ ಉಳಿದಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್ತಿನ ಭಾಷಣದಲ್ಲಿ
‘ಐತಿಹಾಸಿಕ ಲೋಕ, ವ್ಯವಸ್ಥಿತ ದರೋಡೆ’ ಎಂದು ಬಣ್ಣಿಸಿದ್ದರು. ಸಿಂಗ್ ಅವರ ಸಂಸತ್ ಭಾಷಣ ಹೊರತು ಪಡಿಸಿದರೆ
ಪ್ರಧಾನ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳೂ ಮಂಪರಿನಲ್ಲಿದ್ದವು. ವಿರೋಧ ಪಕ್ಷದ
ಹೊಣೆಗಾರಿಕೆಯನ್ನು ಅರಿಯಲು- ನಿಭಾಯಿಸಲು ಸಾಧ್ಯವೇ ಆಗಲಿಲ್ಲ. ಸಮಸ್ಯೆಯ ಸ್ವರೂಪ ಅಂದಾಜು ಮಾಡಲು-
ಅರಿಯಲು ಮಾಧ್ಯಮಗಳು ವಿಫಲವಾದವು.

note ban ಗೆ ಚಿತ್ರದ ಫಲಿತಾಂಶ
ಇಡೀ ದೇಶದ ಆರ್ಥಿಕತೆಯು ಪಾರ್ಶ್ವವಾಯು ಪೀಡಿತವಾಯಿತು. ಆಗಲೇ ಬ್ಯಾಂಕ್ ನ ಕಟ್ಟಡ ಬೀಳಿಸಿ ಇಲಿ ಹಿಡಿದ
ವ್ಯಂಗ್ಯಚಿತ್ರ ಬಂದಿತ್ತು. ಈಗ ಆಡಳಿತಾರೂಢ ಎನ್ ಡಿಎದ ಮೈತ್ರಿಪಕ್ಷವಾದ ಶಿವಸೇನಾ ‘ಬೆಟ್ಟ ಅಗೆದು ಇಲಿಯನ್ನೂ
ಹಿಡಿಯಲಿಲ್ಲ’ ಎಂದು ಪ್ರತಿಕ್ರಿಯಿಸಿದೆ. ದೇಶದಾದ್ಯಂತ ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿಗಳ ನೋಟುಗಳ
ಪೈಕಿ ಶೇ. 99.3ರಷ್ಟು ನೋಟುಗಳು ಆರ್ ಬಿಐಗೆ ಮರಳಿವೆ. ದೇಶದಲ್ಲಿ ಕಪ್ಪುಹಣ ನಗದು ರೂಪದಲ್ಲಿ ಇರಲೇ ಇಲ್ಲ ಅಥವಾ
ನೋಟುಗಳ ರೂಪದಲ್ಲಿ ಇದ್ದ ಕಪ್ಪುಹಣವೆಲ್ಲ ಬಿಳಿಯಾಯಿತು ಎಂದೇ ಅರ್ಥ. ಈಗ ಹಣಕಾಸು ಖಾತೆಯ ರಾಜ್ಯ ಸಚಿವರು
‘ಕಪ್ಪು ಹಣದ ಉದ್ದೇಶವೇ ನೋಟು ಅಮಾನ್ಯೀಕರಣಕ್ಕೆ ಇರಲಿಲ್ಲ’ ಎಂದರೆ ಹಣಕಾಸು ಸಚಿವರು ‘ವ್ಯಾಪಕವಾದ ಅರ್ಥದಲ್ಲಿ
ನೋಟು ಅಮಾನ್ಯ ಯಶಸ್ವಿಯಾಗಿದೆ’ ಎಂದು ಮುಗಮ್ಮಾಗಿ ಪ್ರತಿಕ್ರಿಯಿಸಿದ್ದಾರೆ. ನೋಟು ಅಮಾನ್ಯ ಮಾಡಿದ ಇಡೀ
ಪ್ರಕ್ರಿಯೆಯು ಹಳೆಯ ನೋಟನ್ನು ಹೊಸದಕ್ಕೆ ಬದಲಾಯಿಸಿದ್ದಕ್ಕಷ್ಟೇ ಸೀಮಿತವಾಯಿತು. ಅದಕ್ಕಾಗಿ ತೆತ್ತ ಬೆಲೆ ಮಾತ್ರ
ಅಗಾಧ- ಅಗಣಿತ.

ಸಂಬಂಧಿತ ಚಿತ್ರ

ಸಣ್ಣ ಕೈಗಾರಿಕೆ-ಉದ್ಯಮಗಳ ಬೆನ್ನು ಮೂಳೆಯೇ ಮುರಿದು ಹೋದರೆ ಹಣವೇ ವಹಿವಾಟಿನಲ್ಲಿ ಪ್ರಧಾನ ಪಾತ್ರ ವಹಿಸಿದ ಅಸಂಘಟಿತ ವಲಯ ಸಂಪೂರ್ಣವಾಗಿ ಕುಸಿದು ಹೋಯಿತು. ಸರದಿ ಸಾಲಿನಲ್ಲಿ ನಿಂತು ಸತ್ತವರ ಸಂಖ್ಯೆಯೇ 150ಕ್ಕೂ ಹೆಚ್ಚಾದರೆ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಈಡಾದವರ ಸಂಖ್ಯೆಯನ್ನು ಅಂದಾಜಿಸುವುದೂ ಕಷ್ಟವಾಗುತ್ತಿದೆ. ಕಪ್ಪು ಹಣವೆಲ್ಲ ಬಿಳಿಯಾಗುವುದರ ಜೊತೆಯಲ್ಲಿಯೇ ನಕಲಿ ನೋಟುಗಳ ಚಲಾವಣೆಯ ಪ್ರಕ್ರಿಯೆಯೂ ಮುಂದುವರೆದಿದೆ ಅನ್ನುವುದಕ್ಕಿಂತ ಹೆಚ್ಚಾಗಿದೆ ಎನ್ನುವುದೇ ಸರಿ. ಉಗ್ರಗಾಮಿ, ಭಯೋತ್ಪಾದಕ ಚಟುವಟಿಕೆಗಳ ನಿಯಂತ್ರಣ ಕೂಡ ಸಾಧ್ಯವಾಗಿಲ್ಲ. ಶ್ವೇತಪತ್ರ ಹೊರಡಿಸುವಂತೆ ಕೇಳಬೇಕಿದ್ದ ವಿರೋಧ ಪಕ್ಷಗಳ ಮುಖವೇ ಬಿಳುಚಿಕೊಂಡಿದೆ. ತಪ್ಪಲ್ಲ ಅಪರಾಧ  ಮಾಡಿದ ‘ಚೌಕಿದಾರ’ ಮುಖಮುಚ್ಚಿಕೊಂಡು ಕುಳಿತಿದ್ದಾರೆ. ಟೆಲಿವಿಷನ್ ತೆರೆಯ ಮೇಲೆ ಕಾಣಿಸಿಕೊಂಡು ‘ಹೊಣೆ’ ಹೋರಬೇಕಾಗಿದ್ದ ಪ್ರಧಾನಿ’ ಮುಖೇಡಿಯಂತೆ ಟ್ವೀಟ್ ಕೂಡ ಮಾಡಲಾಗದ ಅಸಹಾಯಕ ಸ್ಥಿತಿ ತಲುಪಿದ್ದಾರೆ.

note ban ಗೆ ಚಿತ್ರದ ಫಲಿತಾಂಶ

ನೋಟ್ ಬಂದಿಯ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದ ಉದ್ದೇಶಗಳೆಲ್ಲ ವಿಫಲವಾಗಿರುವುದನ್ನು ಆರ್ ಬಿ ಐ ವರದಿಯು ಖಚಿತ
ಪಡಿಸಿದೆ. ಮಾತ್ರವಲ್ಲ, ಬದಲಿಸಿದ ಗೋಲ್ ಪೋಸ್ಟ್ ನ ಉದ್ದೇಶಗಳೂ ಈಡೇರಿಲ್ಲ ಎಂಬುದನ್ನೂ ವರದಿ ದೃಢಪಡಿಸಿದೆ. ಸದ್ಯ
ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ ಇದ್ದದ್ದಕ್ಕಿಂತ ಶೇ. 37ರಷ್ಟು ನೋಟುಗಳ ಪ್ರಮಾಣ ಹೆಚ್ಚಿದೆ. ಕಪ್ಪುಹಣದ ಕತೆ ಹಳ್ಳ
ಹಿಡಿದ ಹಾಗೆಯೇ ಕ್ಯಾಷ್ ಲೆಸ್ ಅಥವಾ ಲೆಸ್ ಕ್ಯಾಷ್ ಎಕಾನಮಿಯದೂ ಆಗಿದೆ. ಈಗ ವಿತ್ತ ಸಚಿವರು ತೆರಿಗೆದಾರರ
ಪ್ರಮಾಣ ಹೆಚ್ಚಳ ಆದದ್ದು ಲಾಭ ಎಂದು ಹೇಳುತ್ತಿದ್ದಾರೆ. ಅದು ಕೂಡ ಅರ್ಧ ಸತ್ಯ ಎಂಬುದು ಸುಳ್ಳೇನಲ್ಲ. ಪ್ರತಿವರ್ಷ
ಸರಾಸರಿ ಶೇ. 10ರಷ್ಟು ಆದಾಯ ತೆರಿಗೆಯ ರಿಟರ್ನ್ ಸಲ್ಲಿಸುವವರ ಪ್ರಮಾಣ ಹೆಚ್ಚುತ್ತದೆ. ನಿಯಮಿತ ಬೆಳವಣಿಗೆಗಿಂತ
ಕೇವಲ ಶೇ. 3ರಷ್ಟು ಮಾತ್ರ ವೃದ್ಧಿಯಾಗಿದೆ. ಅಂದರೆ ತೆರಿಗೆದಾರರ ಪ್ರಮಾಣದಲ್ಲಿ ಶೇ. 10ರಷ್ಟು ಹೆಚ್ಚಾಗುವ ಬದಲಿಗೆ ಅದು
ಶೇ. 13ರಷ್ಟು ಹೆಚ್ಚಾಗಿದೆ.

note ban rbi ಗೆ ಚಿತ್ರದ ಫಲಿತಾಂಶ
ಅಚ್ಚರಿ ಮತ್ತು ಚೋದ್ಯದ ಸಂಗತಿಯೆಂದರೆ ಎದೆತಟ್ಟಿ ಮಾತನಾಡುತ್ತಿದ್ದ 56 ಇಂಚಿನ ಎದೆಯ ‘ಚೌಕಿದಾರ’ ಮಾತು ಮರೆತು
‘ಮೌನಿ’ಯಾಗಿದ್ದಾರೆ. ಬೇಕಿರುವುದು ‘ಹಿಡಿಯಷ್ಟು ಹೃದಯ’ ಎಂದ ‘ಯುವರಾಜ’ ಮತ್ತವನ ಪಡೆಯ ಹೋರಾಟ
ಪತ್ರಿಕಾಗೋಷ್ಠಿ ನಡೆಸುವ ‘ಕ್ರಿಯಾವಿಧಿ’ ಪೂರೈಸುವುದಕ್ಕೆ ಸೀಮಿತವಾಗಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಆಡಳಿತ ಪಕ್ಷ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂಬುದು ಎಷ್ಟು ದೊಡ್ಡ ಸತ್ಯವೋ, ವಿರೋಧ
ಪಕ್ಷಗಳಿಗೆ ಕೂಡ ತಮ್ಮ ಪಾತ್ರ ಏನು ಎಂಬುದರ ಅರಿವೂ ಇಲ್ಲದಂತಿರುವುದು ಕೂಡ ಅಷ್ಟೇ ದೊಡ್ಡ ಸತ್ಯ. ‘ಹೊಣೆ’ಯರಿಯದ
ಪ್ರಧಾನಿ- ಸಚಿವ ಸಂಪುಟ, ವಿರೋಧ ಪಕ್ಷಗಳು, ಮಾಧ್ಯಮಗಳು ಇರುವ ಪ್ರಜಾಪ್ರಭುತ್ವದ ‘ನಡೆ’ಯ ಬಗ್ಗೆ ಕೇವಲ
ಅನುಮಾನ ಮತ್ತು ಶಂಕೆ ಉಂಟಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com