ಪೆಟ್ರೋಲ್​​, ಡೀಸೆಲ್​ ದರ ಏರಿಕೆ ಖಂಡಿಸಿ ನಾಳೆ ಭಾರತ್​ ಬಂದ್​ : ಸಂಚಾರ ಸಂಪೂರ್ಣ ಸ್ಥಗಿತ..!

ತೈಲ ಬೆಲೆ ಏರಿಕೆಗೆ ಕೇಂದ್ರವೇ ಕಾರಣ ಅಂತಾ ಆರೋಪಿಸಿರೋ ಕಾಂಗ್ರೆಸ್ ಪಕ್ಷ ನಾಳೆ ಭಾರತ್ ಬಂದ್‍ಗೆ ಕರೆ ನೀಡಿದೆ. ಎಲ್ಲೆಡೆ ಬಂದ್​ ಕಾವು ಜೋರಾಗಿದೆ. ಬಂದ್‍ಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ಘೋಷಿಸಿದೆ.

ಭಾರತ್​ ಬಂದ್​ ಗೆ ಚಿತ್ರದ ಫಲಿತಾಂಶ

ಇನ್ನೂ ಬಂದ್​ಗೆ ಹತ್ತಾರು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಸೋಮವಾರ ಬೆಳಗ್ಗೆ 06 ಗಂಟೆಯಿಂದಲೇ ಆರಂಭವಾಗಲಿರುವ ಬಂದ್ ಮಧ್ಯಾಹ್ನ 3 ಗಂಟೆವರೆಗೆ ಇರಲಿದೆ. ಹೀಗಾಗಿ, ನಾಳೆ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಿದೆ. ವಾರಾಂತ್ಯಕ್ಕೆ ಊರುಗಳಿಗೆ ಹೋಗಿರೋ ಜನ ವಾಪಸ್ ತಮ್ಮ ಮನೆ ಸೇರಿಕೊಂಡರೆ ಒಳಿತು. ಹಾಗೂ ನಾಳೆ ಕೆಲಸಗಳನ್ನು ಇಂದೇ ಮುಗಿಸಿಕೊಳ್ಳುವುದು ಉತ್ತಮ.

Image result for ಭಾರತ್​ ಬಂದ್​
ಎಐಟಿಯುಸಿ ನೇತೃತ್ವದ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌, ಸಿಐಟಿಯು, ಓಲಾ, ಉಬರ್‌ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ, ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟವು ಬಂದ್‌ಗೆ ಬೆಂಬಲ ನೀಡಿವೆ. ಹೀಗಾಗಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೂ  ರಸ್ತೆಗೆ ಇಳಿಸದಿರಲು ತೀರ್ಮಾನಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com