ಕೌರವನ ಪುತ್ರಿಗೆ ಕೂಡಿ ಬಂದ ಕಂಕಣ ಭಾಗ್ಯ : ಅದ್ದೂರಿಯಾಗಿ ನಡೆದ ನಟಿ ಸೃಷ್ಟಿ ಎಂಗೇಜ್​ಮೇಟ್​

ಬೆಂಗಳೂರು : ಸ್ಯಾಂಡಲ್​ವುಡ್​ನಲ್ಲಿ ಕೌರವ ಎಂದೇ ಖ್ಯಾತಿ ಪಡೆದಿರುವ ನಟ ಹಾಗೂ
ಹ್ಯಾಪಿ ನ್ಯೂಯರ್​ ಎಂಬ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ಶಾಸಕ ಬಿಸಿ ಪಾಟೀಲ್​ ಹಾಗೂ ವನಜಾ ಪಾಟೀಲ್​ ದಂಪತಿಯ ಮುದ್ದಿನ ಮಗಳು ನಟಿ ಸೃಷ್ಟಿ, ಬೇಲೂರಿನ ಸುಜಯ್​ ಎಂಬುವರನ್ನು ವರಿಸಲಿದ್ದಾರೆ. ಇತ್ತೀಚಿಗಷ್ಟೆ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಎಂಗೇಜ್​ಮೆಂಟ್ ನಡೆದಿದೆ.
ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಜೋಡಿಗೆ ಎರಡು ಕುಟುಂಬಗಳ ಆಪ್ತರು ಹಾಗೂ ಕೆಲ ರಾಜಕೀಯ ಗಣ್ಯರು  ಜೋಡಿಗೆ ಆಶೀರ್ವಾದ ಮಾಡಲು ಬಂದಿದ್ರು. ಮುಂದಿನ ವರ್ಷ ಮದುವೆ ನೆರವೇರಲಿದೆ ಎಂದು ಕುಟುಂಬಗಳಿಂದ ಮಾಹಿತಿ ತಿಳಿದುಬಂದಿದೆ. ಇನ್ನು ಮದುವೆ ಎಲ್ಲಿ ಮತ್ತು  ಯಾವಾಗ ಎಂದು ತಿಳಿದುಬಂದಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com