ಕೇಂದ್ರದ ವಿರುದ್ಧ ಕಾಂಗ್ರೆಸ್ ಜನಾಂದೋಲನ -SEP 10 ರಂದು ಭಾರತ ಬಂದ್‍ಗೆ AICC ಕರೆ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜನಾಂದೋಲನವನ್ನು ಆರಂಭಿಸಿದ್ದು, ಎಐಸಿಸಿ ಹಾಗೂ ಕೆಪಿಸಿಸಿ ವತಿಯಿಂದ ಸೆಪ್ಟೆಂಬರ್​ 10 ರಂದು ಸೋಮವಾರ ದೇಶಾದ್ಯಂತ ಭಾರತ್ ಬಂದ್ ಕರೆ ನೀಡಲಾಗಿದೆ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಬಂದ್ ಆಚರಿಸಲು ನಿರ್ಧರಿಸಾಗಿದ್ದು, ಜೆಡಿಎಸ್, ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಬಿಜೆಪಿ ಬಿಟ್ಟಿ ಎಲ್ಲಾ ಪಕ್ಷಗಳು ಬಂದ್ಗೆ ಸಹಕರಿಸಲಿವೆ. ಶಿವಮೊಗ್ಗದ ರಾಮಣ್ಣ ಟ್ರಸ್ಟಿ ಪಾರ್ಕ್ನಿಂದ ಮೆರವಣಿಗೆ ಸಾಗಲಿದೆ.

‘ ಎಲ್ಲಾ ತಾಲೂಕುಗಳಲ್ಲಿ ಬಂದ್ ಜಾಥಾ ನಡೆಸಲಾಗುವುದು. ಬಿಜೆಪಿ ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುವುದು. ಬಂದ್ ನಾಮಕಾವಸ್ಥೆ ಮಾಡಲ್ಲ. ವ್ಯವಸ್ಥಿತ ಶ್ರದ್ಧೆಯಿಂದ ಬಂದ್ ನಡೆಸಲಾಗುವುದು ‘ ಎಂದು ತಿ.ನ.ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com