ಜನದ್ರೋಹಿ ಜರ್ನಲಿಸ್‍ಂಗೊಂದು ಪಾಠ.. ಕ್ಷಮೆ ಯಾಚಿಸಬೇಕಾದ ಅರ್ನಾಬ್ ಗೋಸ್ವಾಮಿ!

ಜನದ್ರೋಹಿ ಜರ್ನಲಿಸ್‍ಂಗೊಂದು ಪಾಠ
ಕ್ಷಮೆ ಯಾಚಿಸಬೇಕಾದ ಅರ್ನಾಬ್ ಗೋಸ್ವಾಮಿ!
ಇವತ್ತು ರಿಪಬ್ಲಿಕ್ ಟಿವಿ ಜನತೆಯಕ್ಷಮೆ ಯಾಚಿಸಲೇ ಬೇಕಿದೆ. ಅದರ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಜನೆವರಿಯಲ್ಲಿ ಮಾಡಿದ ಮಾನಹಾನಿ ಕಮೆಂಟುಗಳಿಗಾಗಿ ರಿಪಬ್ಲಿಕ್ ಟಿವಿ ಇವತ್ತು (ಸೆಪ್ಟೆಂಬರ್ 7) ರಾತ್ರಿ 9 ಗಂಟೆಯ ಪ್ರೈಮ್ ಡಿಬೇಟ್‍ಗೂ ಮುನ್ನ ಫುಲ್‍ಸ್ಕ್ರೀನ್‍ನಲ್ಲಿ ಕ್ಷಮೆ ಯಾಚನೆ ಮಾಡುವಂತೆ ನ್ಯೂಸ್ ಬ್ರಾಡಕಾಸ್ಟರ್ಸ್ ಅಸೋಷಿಯೇಷನ್ ಅಗಸ್ಟ್ 30ರಂದು ಆದೇಶ ಹೊರಡಿಸಿದೆ.

ಎ. ಸಿಂಗ್ ಎನ್ನುವವರು ತಮ್ಮ ಮೇಲೆ ವೃಥಾ ಮಾನಹಾನಿ ಆರೋಪ ಮಾಡಿದ್ದಾರೆ ಎಂದು ಅರ್ನಾಬ್ ಗೋಸ್ವಾಮಿ ವಿರುದ್ಧ ದೂರು ದಾಖಲಿಸಿದ್ದರು. ಜನೆವರಿ 9ರಂದು ಗುಜರಾತಿನಲ್ಲಿ ನಡೆದ ಶಾಸಕ ಜಿಗ್ನೇಶ್ ಮೇವಾನಿಯವರ ರ್ಯಾಲಿಯಲ್ಲಿ ರಿಪಬ್ಲಿಕ್ ಟಿವಿಯ ವರದಿಗಾರ್ತಿಗೆ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡಿದ ವ್ಯಕ್ತಿ ಎಂದು ಎ. ಸಿಂಗ್ ವಿರುದ್ಧ ಆಧಾರರಹಿತ ಆರೋಪವನ್ನು ಮಾಡಿದ್ದರು ಅರ್ನಾಬ್ ಗೋಸ್ವಾಮಿ.

ಘಟನೆಯ ದೃಶ್ಯವನ್ನು ಬಿತ್ತರಿಸಿದ್ದ ಗೋಸ್ವಾಮಿ, ಎ. ಸಿಂಗ್ ಅವರ ಮುಖದ ಮೇಲೆ ವೃತ್ತ ಹಾಕಿ, ಈ ಗೂಂಡಾನನ್ನು ನೋಡಿ ಎಂದು ಸುದ್ದಿ ಪ್ರಸಾರ ಮಾಡಿದ್ದರು. ಆದರೆ ಎ.ಸಿಂಗ್ ಅಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ನ್ಯೂಸ್ ಬ್ರಾಡಕಸ್ಟರ್ಸ್ ಅಸೋಷಿಯೇಷನ್ ವಿಚಾರಣೆಯಲ್ಲಿ ಸಾಬೀತಾಗಿತ್ತು. ‘ಈ ಲಂಪಟರ, ಸ್ತ್ರೀ ವಿರೋಧಿಗಳ, ಗೂಂಡಾಗಳ, ಕುಡುಕರ ಇನ್ನೊಂದು ಮುಖವನ್ನು ಬಯಲು ಮಾಡುವೆ’ ಎಂಬ ಅರ್ನಾಬ್ ಟೀಕೆಗಳಿಗೆ ನ್ಯೂಸ್ ಬ್ರಾಡಕಸ್ಟರ್ಸ್ ಅಸೋಷಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ. ಅತ್ಯಂತ ಹಗುರ, ಅಶ್ಲೀಲ ಭಾಷೆ ಉಪಯೋಗಿಸಿದ್ದನ್ನು ಸಂಸ್ಥೆ ಖಂಡಿಸಿದೆ.
ಈ ಮೊದಲು ಘಟನೆಯ ಮರುದಿನವೇ ರಿಪಬ್ಲಿಕ್ ಟಿವಿ ಕ್ಷಮೆ ಯಾಚನೆ ಮಾಡಿತ್ತು. ಎಬಿಪಿ ವರದಿಗಾರ ಜೈನೇಂದ್ರ ಕುಮಾರ್ ಮುಖದ ಮೇಲೆ ವೃತ್ತ ಹಾಕಿ, ಅವರನ್ನು ಗೂಂಡಾ ಎಂದು ಆಧಾರರಹಿತವಾಗಿ ಹೀಯಾಳಿಸಲಾಗಿತ್ತು. ತಪ್ಪು ಒಪ್ಪಿಕೊಂಡಿದ್ದ ರಿಪಬ್ಲಿಕ್ ಟಿವಿ ಸಾರ್ವಜನಿಕ ಕ್ಷಮೆ ಯಾಚಿಸಿತ್ತು.
ಅರ್ನಾಬ್ ಗೋಸ್ವಾಮಿಯ ಜನದ್ರೋಹಿ ಜರ್ನಲಿಸ್‍ಂ ಕಾರಣಕ್ಕಾಗಿ ರಿಪಬ್ಲಿಕ್ ಟಿವಿ ಇವತ್ತು ಕ್ಷಮೆ ಯಾಚಿಸಬೇಕಾಗಿ ಬಂದಿದೆ.
ಪಕ್ಷಪಾತೀಯ ಪತ್ರಿಕೋದ್ಯಮಕ್ಕೆ ಧಿಕ್ಕಾರವಿರಲಿ.
-ಪಿ.ಕೆ. ಮಲ್ಲನಗೌಡರ್

Leave a Reply

Your email address will not be published.