ಅಚ್ಛೇ ದಿನ್ ಆಯೇಗಾ ಅಂದ ಮೋದಿ ಬೆಲೆ ಏರಿಕೆ ಮೂಲಕ ಉತ್ತರ ಕೊಟ್ಟಿದ್ದಾರೆ : ರಮಾನಾಥ್ ರೈ

ಮಂಗಳೂರಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ ನೀಡಿದ್ದಾರೆ. ‘ ತೈಲ ಬೆಲೆ ಏರಿಕೆಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಮೋದಿ ಸರ್ಕಾರ ಜನರಿಗೆ ಅಚ್ಛೇದಿನ್ ಆಯೆಗಾ ಅಂದೂ ಅಂದೂ ಬೆಲೆ ಏರಿಕೆ ಮೂಲಕ ಉತ್ತರ ಕೊಟ್ಟಿದ್ದಾರೆ. ಜನರಿಗೆ ಈಗ ಅಚ್ಛೇದಿನ್ ಬಗ್ಗೆ ಗೊತ್ತಾಗಿರಬಹುದು ‘ ಎಂದು ರಮಾನಾಥ್ ವಾಗ್ದಾಳಿ ನಡೆಸಿದ್ದಾರೆ.

‘ ಹಾಗಾಗಿ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಸೆಪ್ಟೆಂಬರ್ 10ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಂದ್ ಗೆ ಜನ ಸಂಪೂರ್ಣ ಬೆಂಬಲ ನೀಡಬೇಕು ‘ ಎಂದು ರಮಾನಾಥ್ ರೈ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com