ಮೋದಿ ಬಾಲಗಳಿಗೆ ಕೃಷಿ ಸಾಲ..! ಅಂಬಾನಿಯ ರಿಲಾಯನ್ಸ್ ಗೂ ಪಾಲು.!

ಪಿ.ಕೆ.ಮಲ್ಲನಗೌಡರ

ಮೋದಿ ಬಾಲಗಳಿಗೆ ಕೃಷಿ ಸಾಲ! ಅಂಬಾನಿಯ ರಿಲಾಯನ್ಸ್‍ಗೂ ಪಾಲು!
59 ಸಾವಿರ ಕೋಟಿ 631 ಖಾತೆಗಳಿಗೆ ಜಮಾ!
(ಕನ್ನಡಕ್ಕೆ: ಪಿ.ಕೆ. ಮಲ್ಲನಗೌಡರ್)

2016ರಲ್ಲಿ ಸಾರ್ವಜನಿಕ ಬ್ಯಾಂಕ್‍ಗಳು 58,561 ಕೋಟಿ ರೂ. ಕೃಷಿ ಸಾಲವನ್ನು ಕೇವಲ 631 ಅಕೌಂಟ್‍ಗಳಿಗೆ ವರ್ಗಾಯಿಸಿವೆ. ಪ್ರತಿ ಖಾತೆಗೆ ಸರಾಸರಿ 95 ಕೋಟಿ ರೂ. ಕೃಷಿ ಸಾಲವನ್ನು ವರ್ಗಾಯಿಸುವ ಮೂಲಕ ಲಕ್ಷಾಂತರ ರೈತರಿಗೆ ಮೋಸ ಎಸಗಲಾಗಿದೆ.
‘ದ ವೈರ್’ ಪೋರ್ಟಲ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಸಂಬಂಧಿಸಿ, ರಿಸರ್ವ್ ಬ್ಯಾಂಕ್ ಈ ಮಾಹಿತಿ ಒದಗಿಸಿದೆ. 2015, 2014ರ ಸಾಲಿನಲ್ಲೂ ಕೃಷಿ ಸಾಲವನ್ನು 100, 200 ಕೋಟಿಗಳ ಲೆಕ್ಕದಲ್ಲಿ ಅಂಬಾನಿ ಮುಂತಾದ ಮೋದಿ ಹಿಂಬಾಲಕರ ಕಂಪನಿಗಳಿಗೆ ವರ್ಗಾಯಿಸುತ್ತ ಬರಲಾಗಿದೆ. ಯುಪಿಎ ಆಡಳಿತದ ಅವಧಿಯಲ್ಲೂ ಕೃಷಿ ಸಾಲ ಕಂಪನಿಗಳ ಪಾಲಾಗುತ್ತ ಬಂದಿತ್ತು. ಈಗ ಚೌಕಿದಾರ್ ಮಣ್ಣಿನ ವಾಸನೆಯನ್ನೇ ಗ್ರಹಿಸದ ಬಂಡವಾಳಶಾಹಿಗಳ ಅಕೌಂಟಿಗೆ ಹಾಕಲಾಗುತ್ತಿದೆ. ರೈತ್ ಕಾ ನಾಮ್, ದೇಶ ಕೊ ಪಂಗನಾಮ್!

ಇತರ ಸಾಮಾನ್ಯ ಸಾಲಗಳಿಗಿಂತ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲಗಳನ್ನು ಒದಗಿಸಲಾಗುತ್ತಿದ್ದು, ಮಧ್ಯಮ ಮತ್ತು ಸಣ್ಣ ರೈತರಿಗೆ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಸದ್ಯ ಕೃಷಿ ಸಾಲಚನ್ನು ಶೇ. 4ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ.
ರೈತ ಸ್ವರಾಜ್ಯ ವೇದಿಕೆಯ ಸಂಸ್ಥಾಪಕ ಕಿರಣಕುಮಾರ ವಿಸ್ಸಾರ ಅಧ್ಯಯನದ ಪ್ರಕಾರ, ಹಲವಾರು ಕಾರ್ಪೋರೇಟ್ ಕಂಪನಿಗಳು ಅಗ್ರೊ-ಬ್ಯುಸಿನೆಸ್ ವ್ಯವಹಾರದಲ್ಲಿ ನಿರತವಾಗಿದ್ದು, ಅವು ರೈತರಿಗೆ ಸಲ್ಲಬೇಕಾದ ಕೃಷಿ ಸಾಲವನ್ನು ಲಪಟಾಯಿಸುತ್ತಿವೆ. ಅಂಬಾನಿಯ ರಿಲಾಯನ್ಸ್ ಫ್ರೆಶ್ ಕಂಪನಿ ಅಗ್ರೊ-ಬ್ಯುಸಿನೆಸ್ ವ್ಯವಹಾರ ನಡೆಸುತ್ತಿದ್ದು, ಗೋಡೌನ್‍ಗಳ ನಿರ್ಮಾಣದಂತಹ ಕೃಷಿಯೇತರ ಕೆಲಸಗಳಿಗಾಗಿ ಅಪಾರ ಮೊತ್ತದ ಕೃಷಿ ಸಾಲವನ್ನು ಕಡಿಮೆಬಡ್ಡಿ ದರದಲ್ಲಿ ಪಡೆಯುತ್ತಿದೆ. ಕೇಂದ್ರ ಸರ್ಕಾರ ಮಾತ್ರ ರೈತರಿಗೆ 2016ರಲ್ಲಿ 59 ಸಾವಿರ ಕೋಟಿ ರೂ. ಸಾಲ ಒದಗಿಸಿದ್ದಾಗಿ ಸುಳ್ಳು ಹೇಳುತ್ತ ಬಂದಿದೆ.
ಎಲ್ಲ ಬ್ಯಾಂಕ್‍ಗಳು ತಮ್ಮ ಆದಾಯದ ನಿರ್ದಿಷ್ಟ ಮೊತ್ತವನ್ನು ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳಿಗೆ ಸಾಲದ ರೂಪದಲ್ಲಿ ನೀಡಬೇಕೆಂದು ಆರ್‍ಬಿಐ ನಿಯಮ ರೂಪಿಸಿದೆ. ಇದನ್ನು ಆದ್ಯತಾ ವಲಯ ಸಾಲ ಎನ್ನಲಾಗುತ್ತಿದ್ದು, ಇದರಲ್ಲಿ ಶೇ.18ರಷ್ಟನ್ನು ಕೃಷಿ ಸಾಲಗಳಿಗೆ ವಿನಿಯೋಗಿಸಬೇಕು. ಆದರೆ ಕೃಷಿಯ ಜೊತೆಗೆ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಈ ವಿಭಾಗಕ್ಕೆ ಸೇರಿಸಲಾಗಿದೆ. ಇದರ ಲಾಭ ಪಡೆಯುತ್ತಿರುವ ದೈತ್ಯ ಅಗ್ರೊ-ಬ್ಯುಸಿನೆಸ್ ಕಂಪನಿಗಳು ರೈತರ ಸಾಲವನ್ನು ಕಬಳಿಸುತ್ತಿವೆ.


ತಮ್ಮ ಸಂಪನ್ಮೂಲಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಮತ್ತು ಕೃಷಿ ಸಾಲದ ಪೂರೈಕೆಯನ್ನು ದಾಖಲೆಗಳಲ್ಲಿ ತೋರಿಸಲು ಬ್ಯಾಂಕ್‍ಗಳು ಕಾರ್ಪೋರೇಟ್ ಕಂಪನಿಗಳೊಂದಿಗೆ ಶಾಮೀಲಾಗಿ ರೈತರನ್ನು ವಂಚಿಸುತ್ತಿವೆ. ಖ್ಯಾತ ಕೃಷಿ-ಆರ್ಥಿಕ ತಜ್ಞ ದೇವಿಂದರ್ ಶರ್ಮಾ ಮೊದಲಿನಿಂದಲೂ ಈ ಬಗ್ಗೆ ಎಚ್ಚರಿಸುತ್ತ ಬಂದಿದ್ದರೂ ಯಾವ ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ., ‘ಗೋಡೌನ್, ಶೈತ್ತಾಗಾರದಂತಹ ಕಮರ್ಷಿಯಲ್ ಸಂಕೀರ್ಣಗಳನ್ನು ನಿರ್ಮಿಸುವುದು ಅದ್ಹೇಗೆ ಕೃಷಿ ಚಟುವಟಿಕೆ ಆಗುತ್ತದೆ? ಮೊದಲು ಆರ್‍ಬಿಐ ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ’ ಎಂದು ಶರ್ಮಾ ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಒಂದು ಅಗ್ರಿ-ಬ್ಯುಸಿನೆಸ್ ಕಂಪನಿಗೆ 100 ಕೋಟಿ ರೂ. ಸಾಲ ಕೊಡಲು ಯಾವುದೇ ತೊಂದರೆಯಿಲ್ಲ! ಇದೇ ಮೊತ್ತವನ್ನು 200-250 ಸಣ್ಣ ಮತ್ತು ಮಧ್ಯಮ ರೈತ ಕುಟುಂಬಗಳಿಗೆ ನೀಡಲು ಬ್ಯಾಂಕುಗಳಿಗೆ ಆಸಕ್ತಿಯಿಲ್ಲ! ಕಾರ್ಪೋರೇಟ್‍ಗಳ ಪರವಾಗಿಯಾ ಇರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ತನ್ನ 18% ಕೃಷಿ ಸಾಲದ ಗುರಿಯನ್ನು ತಲುಪಿ, ಕೈ ತೊಳೆದುಕೊಂಡು ಬಿಡುತ್ತವೆ.

Image result for modi farmers

2014-15ರಲ್ಲಿ 8 ಲಕ್ಷ ಕೋಟಿ ರೂ.ಗಳನ್ನು ಈಗಿನ ಎನ್‍ಡಿಎ ಸರ್ಕಾರ ಬ್ಯಾಂಕುಗಳ ಮೂಲಕ ವಿತರಿಸಿದೆ. 2017-18ರಲ್ಲಿ ಈ ಮೊತ್ತ 11 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಆರ್‍ಬಿಐ ನೀಡಿರುವ ಅಂಕಿಅಂಶಗಳ ಪ್ರಕಾರ ಈ ಕೃಷಿಸಾಲವೆಲ್ಲ ಅಗ್ರೊ-ಬಿಸಿನೆಸ್ ಹೆಸರಿನ ಕಳ್ಳ ಖದೀಮ ಕಂಪನಿಗಳ ಪಾಲಾಗಿದೆ. ಯಾವ್ಯಾವ ಕಂಪನಿಗಳಿಗೆ ಎಷ್ಟೆಷ್ಟು ಕೃಷಿ ಸಾಲ ಕೊಡಲಾಗಿದೆ ಎಂಬ ಮಾಹಿತಿಯನ್ನು ನೀಡಲು ಆರ್‍ಬಿಐ ಮತ್ತು ಬ್ಯಾಂಕುಗಳು ನಿರಾಕರಿಸುತ್ತಿವೆ. ಮುಂಬೈ ನಗರದ ಎಸ್‍ಬಿಐ ಶಾಖೆಯೊಂದು 2016ರಲ್ಲಿ 29 ಕೋಟಿ ರೂ.ಕೃಷಿ ಸಾಲವನ್ನು ಕೇವಲ ಮೂರು ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ನೀಡಿದೆ.
2015ರಲ್ಲಿ 52, 143 ಕೋಟಿ ರೂ.ಗಳನ್ನು 604 ಖಾತೆಗಳಿಗೆ( ತಲಾ ಸರಾಸರಿ 86.33 ಕೋಟಿ ರೂ.), 2014ರಲ್ಲಿ 61 ಸಾವಿರ ಕೋಟಿಗಳನ್ನು ಮತ್ತೆ 669 ಕಂಪನಿ ಖಾತೆಗಳಿಗೆ ತಲಾ 91.5 ಕೋಟಿ ರೂ.ಗಳಂತೆ ವಿತರಿಸಲಾಗಿದೆ. ಯುಪಿಎ ಸರ್ಕಾರದ ಎರಡನೇ ಬಾರಿಯ ಅವಧಿಯುದ್ದಕ್ಕೂ ಇವೇ 600 ಚಿಲ್ಲರೆ ಕಂಪನಿಗಳು ಕಡಿಮೆ ದರದಲ್ಲಿ ರೈತರ ಹೆಸರಲ್ಲಿ ಕೃಷಿ ಸಾಲವನ್ನು ಕಬಳಿಸುತ್ತ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸುತ್ತ ನಡೆದಿವೆ.
ಒಂದು ಕಡೆ ಕೃಷಿ ಸಾಲವನ್ನು ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ‘ಆರ್ಥಿಕ ಶಿಸ್ತಿನ’ ಬಗ್ಗೆ ಮಾತಾಡುವ ಮೋದಿ, ಜೇಟ್ಲಿಗಳು ತಮ್ಮ ಚೇಲಾ ಉದ್ಯಮಿಗಳಿಗೆ ಬ್ಯಾಂಕುಗಳನ್ನು ಒತ್ತೆ ಇಟ್ಟಂತೆ ಕಾಣುತ್ತಿದೆ. ಅಂಬಾನಿ-ಅದಾನಿಗಳು ‘ಅಚ್ಛೇ ದಿನ್’ ಎಂದು ಸಂಭ್ರಮಿಸದೇ ಇನ್ನೇನು ಮಾಡಿಯಾರು?
(ಕೃಪೆ: ‘ದ ವೈರ್’)

Leave a Reply

Your email address will not be published.