ಕೊಡಗು : ‘ನಾನು ಕೂಡ ಅರ್ಬನ್ ನಕ್ಸಲ್’ ಘೋಷಣೆ ಹಿನ್ನೆಲೆ – ಗಿರೀಶ್ ಕಾರ್ನಾಡ್ ವಿರುದ್ಧ ದೂರು

ಕೊಡಗು : ಸಾಹಿತಿ ಗಿರೀಶ್ ಕಾರ್ನಾಡ್ ಸೇರಿದಂತೆ ಹಲವರ ವಿರುದ್ದ ಮಡಿಕೇರಿ ಪೊಲೀಸರಿಗೆ ದೂರು ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಅಜಿತ್ ಕುಮಾರ್ ಅವರಿಂದ ದೂರು ಸಲ್ಲಿಕೆಯಾಗಿದೆ

‘ ನಾನು ಕೂಡ ಅರ್ಬನ್ ನಕ್ಸಲ್ ಎಂದು ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಗಿರೀಶ್ ಕಾರ್ನಾಡ್, ಸ್ವಾಮಿ ಅಗ್ನಿವೇಶ್, ಪ್ರಕಾಶ್ ರೈ, ಕನ್ನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದಾರೆ.

‘ ಕೊಡಗು ಜಿಲ್ಲೆಯ ನಕ್ಸಲ್ ಚಟುವಟಿಕೆಯಲ್ಲೂ ಭಾಗಿಯಾಗಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ. ವಕೀಲ ಕೃಷ್ಣಮೂರ್ತಿ ಸಮ್ಮುಖದಲ್ಲಿ ಅಜಿತ್, ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣೆಗೆ‌ ದೂರು ದಾಖಲಿಸಿದ್ದಾರೆ.
*

Leave a Reply

Your email address will not be published.

Social Media Auto Publish Powered By : XYZScripts.com