Cricket : ಟೀಮ್ ಇಂಡಿಯಾ ಶಿಸ್ತಿನ ಬೌಲಿಂಗ್ ದಾಳಿ – ಇಂಗ್ಲೆಂಡ್‍ಗೆ ಕುಕ್ ಅರ್ಧಶತಕದ ಆಸರೆ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಲಂಡನ್ನಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡಿದೆ. ಹಾರ್ದಿಕ್ ಪಾಂಡ್ಯ ಹಾಗೂ ಅಶ್ವಿನ್ ಅವರನ್ನು ಪ್ಲೇಯಿಂಗ್ ಇಲೆವನ್ ನಿಂದ ಕೈಬಿಡಲಾಗಿದ್ದು, ಹನುಮ ವಿಹಾರಿ ಹಾಗೂ ಜಡೇಜಾಗೆ ಅವಕಾಶ ನೀಡಲಾಗಿದೆ.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ದುಕೊಂಡರು. ಬ್ಯಾಟ್ ಮಾಡಲಿಳಿದ ಇಂಗ್ಲೆಂಡ್ ಗೆ ಅಲಿಸ್ಟರ್ ಕುಕ್ ಹಾಗೂ ಕೀಟನ್ ಜೆನ್ನಿಂಗ್ಸ್ ಉತ್ತಮ ಆರಂಭ ಒದಗಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಕಳೆದುಕೊಂಡು 198 ರನ್ ಮೊತ್ತ ಕಲೆಹಾಕಿದೆ.

ವಿದಾಯದ ಪಂದ್ಯವನ್ನಾಡುತ್ತಿರುವ ಕುಕ್ (71 ರನ್) ಅರ್ಧಶತಕ ಬಾರಿಸಿದರ. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮೋಯಿನ್ ಅಲಿ 50 ರನ್ ಗಳಿಸಿ ಔಟಾದರು. ಟೀಮ್ ಇಂಡಿಯಾ ಪರವಾಗಿ ವೇಗಿ ಇಶಾಂತ್ ಶರ್ಮಾ 3, ಜಸ್ಪ್ರೀತ್ ಬುಮ್ರಾ 2 ಹಾಗೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com