ಕುದುರೆಮುಖ ಘಾಟ್‍ನಲ್ಲಿ ಸಿಕ್ಕಿ ಹಾಕಿಕೊಂಡ ಐರಾವತ ಬಸ್ : ಟ್ರಾಫಿಕ್ ಜಾಮ್‍ನಿಂದ ಪ್ರಯಾಣಿಕರ ಪರದಾಟ

ಚಿಕ್ಕಮಗಳೂರು : ಕುದುರೆಮುಖ ಘಾಟ್ ನಲ್ಲಿ‌ ಐರಾವತ ಬಸ್ ಸಿಕ್ಕಿ‌ ಹಾಕಿಕೊಂಡಡಿದೆ. ಘಾಟಿಯ ತಿರುವಿನಲ್ಲಿ ಐರಾವತ ಬಸ್ ಸಿಕ್ಕಿಹಾಕಿಕೊಂಡಿರುವುದರಿಂಧ ಕುದುರೆಮುಖ ಘಾಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ.

ಬೆಂಗಳೂರು ‌- ಮಂಗಳೂರು ತೆರಳುವ ವಾಹನ ಸವಾರರ ಪರದಾಡುವಂತಾಗಿದೆ. ಬಾರೀ ಗಾತ್ರದ ವಾಹನಗಳ‌ ಸಂಚಾರಕ್ಕೆ‌ ಇರುವ ಏಕೈಕ ರಸ್ತೆ ಮಾರ್ಗ ಕುದುರೆಮುಖ ಘಾಟ್ ನಲ್ಲಿ ಫುಲ್ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

ಶಿರಾಡಿ, ಚಾರ್ಮಾಡಿ ಘಾಟ್ ನಲ್ಲಿ ಬಾರೀ ಗಾತ್ರದ ವಾಹನಗಳ‌ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಬಾರೀ‌ ಗಾತ್ರದ ವಾಹನಗಳ ಸಂಚಾರಕ್ಕೆ‌ ಕುದುರೆಮುಖ ಘಾಟ್ ಮೂಲಕ ಅನುವು ಮಾಡಿಕೊಡಲಾಗಿದೆ. ಐರಾವತ ಬಸ್ , ಲಾರಿ ಸೇರಿದಂತೆ ದಿನನಿತ್ಯ ಸಾವಿರಾರು ಬಾರೀ ಗಾತ್ರದ ವಾಹನಗಳು ಸಂಚಾರ ಮಾಡುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಘಾಟ್ ನಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com