ಹುಬ್ಬಳ್ಳಿ : ಆಟೋದಲ್ಲಿ ಬಿಟ್ಟುಹೋದ 2 ಲಕ್ಷ ಹಣ ಪೋಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ..!

ಹುಬ್ಬಳ್ಳಿ : ಆಟೋದಲ್ಲಿ ಬಿಟ್ಟು ಹೋದ 2 ಲಕ್ಷಕ್ಕೂ ಅಧಿಕ ಹಣವನ್ನು ಆಟೋ ಚಾಲಕ ಪೊಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ನೇಕಾರ ನಗರ ಆಟೋ ಚಾಲಕ ನಾಗರಾಜ್ ಸುಬ್ಬಣ್ಣವರ್ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ದಿನವಡಿ ಆಟೋ ಚಾಲನೆ ಮಾಡಿದ್ದ ನಾಗರಾಜ್ ಮನೆಗೆ ಬಂದು ನೋಡಿದಾಗ ಆಟೋದಲ್ಲಿ ಬ್ಯಾಗ್ ಪತ್ತೆಯಾಗಿದೆ.

ಬ್ಯಾಗ್ ನಲ್ಲಿ ಹಣ ವಿರೋದು ಪತ್ತೆ‌ಯಾಗಿದ್ದು, 2 ಲಕ್ಷಕ್ಕೂ ಅಧಿಕ ಹಣವನ್ನು ಆಟೋಚಾಲಕ ಪೋಲೀಸರಿಗೆ ನೀಡಿದ್ದಾರೆ. ಹಣ ಯಾರೆದ್ದೆಂದು ಗೊತ್ತಾಗದೇ ಪೊಲೀಸರಿಗೆ ಆಟೋ ಚಾಲಕ‌ ನೀಡಿದ್ದಾರೆ.

ಹುಬ್ಬಳ್ಳಿ ದಕ್ಷಿಣ ಉಪ ವಿಭಾಗ ಎಸಿಪಿ ಎನ್ ಬಿ ಸಕ್ರಿ ಯವರಿಗೆ ಹಸ್ತಾಂತರಿಸಲಾಗಿದ್ದು, ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿ ಎಸಿಪಿಯಿಂದ 5 ಸಾವಿರ ಬಹುಮಾನ ನೀಡಿದ್ದಾರೆ. ಆಟೋ ಚಾಲಕನಿಗೆ ಎಸಿಪಿಯವರು ಬಹುಮಾನ ರೂಪದಲ್ಲಿ 5 ಸಾವಿರ ನೀಡಿದ್ದಾರೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com