ಕೊಹ್ಲಿ ಹಾಗೂ ರೂಟ್ ವಿಶ್ವದ ಅತ್ಯುತ್ತಮ ಬ್ಯಾಟ್ಸಮನ್ ಗಳಾಗಿದ್ದಾರೆ : ಲಾರಾ ಪ್ರಶಂಸೆ

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ವಿಶ್ವದ ಅತ್ಯುತ್ತಮ ಬ್ಯಾಟ್ಸಮನ್ ಗಳಾಗಿದ್ದಾರೆ ಎಂದು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಐಸಿಸಿ ವಿಶ್ವಕಪ್ ಟ್ರೋಫಿ ಟೂರ್ ನ ಪ್ರಯುಕ್ತ ನ್ಯೂಯಾರ್ಕ್ ನಲ್ಲಿರುವ ಬ್ರಿಯಾನ್ ಲಾರಾ ‘ ಶ್ರೀಲಂಕಾದ ಮಾಜಿ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ‘ ಎಂದು ಹೇಳಿದ್ದಾರೆ.

‘ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಹಾಗೂ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಕಗಿಸೋ ರಬಾಡಾ ಸದ್ಯ ಆಡುತ್ತಿರುವವರಲ್ಲಿ ವಿಶ್ವದ ಅತ್ಯುತ್ತಮ ಬೌಲರ್ ಗಳಾಗಿದ್ದಾರೆ ‘ ಎಂದು ಲಾರಾ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸಕ್ತ ಐಸಿಸಿ ಟೆಸ್ಟ್ ಬ್ಯಾಟ್ಸಮನ್ ಗಳ ರ್ಯಾಂಕಿಂಗ್ ನಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಜೋ ರೂಟ್ 5ನೇ ಸ್ಥಾನದಲ್ಲಿದ್ದಾರೆ. ಐಸಿಸಿ ಏಕದಿನ ಬ್ಯಾಟ್ಸಮನ್ ಗಳ ರ್ಯಾಂಕಿಂಗ್ ನಲ್ಲಿಯೂ ಸಹ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com