ಏಷ್ಯಾಕಪ್ ನಲ್ಲಿ ಕೊಹ್ಲಿ ಅನುಪಸ್ಥಿತಿಯಿಂದ ನಮ್ಮ ತಂಡಕ್ಕೆ ಪ್ರಯೋಜನ : ಪಾಕ್ ವೇಗಿ ಹಸನ್ ಅಲಿ

‘ ಏಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯವರ ಅನುಪಸ್ಥಿತಿಯಿಂದ ನಮ್ಮ ತಂಡಕ್ಕೆ ಪ್ರಯೋಜನವಾಗಲಿದೆ ‘ ಎಂದು ಪಾಕ್ ತಂಡದ ವೇಗಿ ಹಸನ್ ಅಲಿ ಅಭಿಪ್ರಾಯ ಪಟ್ಟಿದ್ದಾರೆ.

‘ ವಿರಾಟ್ ಕೊಹ್ಲಿಯೊಂದಿಗೆ ನನ್ನನ್ನು ಹೋಲಿಕೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಅವರು ನನಗಿಂತ ಸೀನಿಯರ್. ಅಲ್ಲದೇ ನನ್ನ ದೃಷ್ಟಿಯಲ್ಲಿ ಕೊಹ್ಲಿ ಲೆಜೆಂಡ್ ಆಗಿದ್ದಾರೆ. ನಾನು ನನ್ನ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವತ್ತ ಗಮನ ಹರಿಸಿದ್ದೇನೆ. ಉತ್ತಮ ಪಿಟ್ನೆಸ್ ನಿಂದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ‘

‘ ವಿರಾಟ್ ಒತ್ತಡವನ್ನು ನಿಭಾಯಿಸುವ ರೀತಿ ಅದ್ಭುತವಾಗಿದೆ. ಕೊಹ್ಲಿಯಂತೆ ಒತ್ತಡವನ್ನು ನಿಭಾಯಿಸಲು ಅವರ ಜಾಗಕ್ಕೆ ಬರುವ ಬೇರೆ ಆಟಗಾರರಿಗೆ ಸಾಧ್ಯವಾಗದಿರಬಹುದು, ಇದು ನಮಗೆ ಪ್ರಯೋಜನಕಾರಿಯಾಗಲಿದೆ ‘ ಎಂದು ಹಸನ್ ಅಲಿ ಹೇಳಿದ್ದಾರೆ.

ಸೆಪ್ಟೆಂಬರ್ 15 ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾಗೆ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com