ಲಂಡನ್ : ಪುತ್ರಿ ಸಾರಾಳ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಸಚಿನ್ ದಂಪತಿ..

ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪದವಿ ಪ್ರದಾನ ಸಮಾರಂಭದ ಫೋಟೊಗಳನ್ನು ಗುರುವಾರ ಹಂಚಿಕೊಂಡಿದ್ದಾರೆ. ಲಂಡನ್ ಕಾಲೇಜಿನಲ್ಲಿ ನಡೆದ ಪುತ್ರಿ ಸಾರಾಳ ಪದವಿ ಪ್ರದಾನ ಸಮಾರಂಭದಲ್ಲಿ ಸಚಿನ್ ಹಾಗೂ ಪತ್ನಿ ಅಂಜಲಿ ಪಾಲ್ಗೊಂಡಿದ್ದರು.

Image result for sara tendulkar graduation day london

ಗ್ರ್ಯಾಜುಯೇಷನ್ ಡೇ ಗೌನ್ ಹಾಗೂ ಕ್ಯಾಪ್ ಧರಿಸಿದ್ದ ಮಗಳೊಂದಿಗೆ ಸಚಿನ್ ಹಾಗೂ ಅಂಜಲಿ ಫೋಟೊಗೆ ಪೋಸ್ ನೀಡಿದ್ದಾರೆ. 20 ವರ್ಷದ ಸಾರಾ, ಲಂಡನ್ ಯೂನಿವರ್ಸಿಟಿ ಕಾಲೇಜಿನಲ್ಲಿ ವೈದ್ಯಕೀಯ ವಿಷಯದ ಅಧ್ಯಯನ ನಡೆಸಿ ಪದವಿಯನ್ನು ಗಳಿಸಿದ್ದಾರೆ. ಸಚಿನ್ ಪತ್ನಿ ಅಂಜಲಿ ತೆಂಡೂಲ್ಕರ್ ಸಹ ಒಬ್ಬ ಡಾಕ್ಟರ್ ಆಗಿದ್ದಾರೆ ಎಂಬುದು ಗಮನಾರ್ಹ. ಈಗ ಮಗಳು ಸಾರಾ ಕೂಡ ತನ್ನ ತಾಯಿಯ ಹಾದಿಯಲ್ಲಿಯೇ ಸಾಗಿದ್ದಾರೆ ಎನ್ನಬಹುದು.

Image result for sara tendulkar graduation day london

ಸಾರಾ ತೆಂಡೂಲ್ಕರ್ ಇನ್ಸ್ಟಾಗ್ರಾಮ್ ನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

View this post on Instagram

I did what?🙊

A post shared by Sara Tendulkar (@saratendulkar) on

 

Leave a Reply

Your email address will not be published.