ದೆಹಲಿ : ಕಾಶ್ಮೀರ ಮೂಲದ ಇಬ್ಬರು ಶಂಕಿತ ISIS ಉಗ್ರರ ಬಂಧನ – ಅತ್ಯಾಧುನಿಕ ಶಸ್ತ್ರಾಸ್ತ್ರ ಪತ್ತೆ

ರಾಜಧಾನಿ ನವದೆಹಲಿಯ ಕೆಂಪುಕೋಟೆ ಬಳಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ದೆಹಲಿ ಪೋಲೀಸ್ ಇಲಾಖೆಯ ವಿಶೇಷ ದಳ ಗುರುವಾರ ರಾತ್ರಿ ಬಂಧಿಸಿದೆ. ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗನಾಪೊರಾ ಹಳ್ಳಿಗೆ ಸೇರಿದವರಾದ ಬಂಧಿತರನ್ನು ಪರ್ವೇಜ್ ಹಾಗೂ ಜಮ್ಷೆಡ್ ಎಂದು ಗುರುತಿಸಲಾಗಿದೆ.

ದೆಹಲಿಯ ಕೆಂಪುಕೋಟೆ ಬಳಿಯ ಬಸ್ ಸ್ಟಾಪ್ ಹತ್ತಿರ ಈ ಇಬ್ಬರನ್ನು ಬಂಧಿಸಲಾಗಿದ್ದು, ಜಾಗತಿಕ ಉಗ್ರ ಸಂಘಟನೆ ಐಸಿಸ್ ನ ಜಮ್ಮು ಕಾಶ್ಮೀರದ ಅಂಗಸಂಸ್ಥೆಯಾಗಿರುವ (ISJK – Islamic state of Jammu and Kashmir) ಯ ಸದಸ್ಯರಾಗಿದ್ದಾರೆ ಎಂದು ಶಂಕಿಸಲಾಗಿದೆ. ಇಂಪೋರ್ಟೆಡ್ ಪಿಸ್ಟಲ್ ಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ.

‘ ಜಮ್ಷೆಡ್ ಎಂಬಾತ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ, ಪರ್ವೇಜ್ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪದವೀಧರನಾಗಿದ್ದು, ಎಮ್.ಟೆಕ್ ಅಧ್ಯಯನ ಮಾಡುತ್ತಿದ್ದ ‘ ಎಂದು ಪೋಲೀಸರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com