ಸಲಿಂಗಕಾಮದಿಂದ ಮಾರಕ ರೋಗಗಳು ಉಂಟಾಗುತ್ತದೆ : ಸುಬ್ರಮಣಿಯನ್​ ಸ್ವಾಮಿ

ನವದೆಹಲಿ : ಸೆಕ್ಷನ್​ 377 ರ ಸಲಿಂಗಕಾಮ ಅಪರಾಧವಲ್ಲ ಎಂದು ನೆನ್ನೆ ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು ನೀಡಿದ್ದು, ಎಲ್ಲೆಡೆ ಸಲಿಂಗಕಾಮಿಗಳ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಈ ತೀರ್ಪನ್ನು ಕೆಲವರು ಸ್ವಾಗತಿಸಿದ್ದು, ಇನ್ನೂ ಕೆಲವರೂ ಅದರ ವಿರೋಧವಿದ್ದಾರೆ. ಇನ್ನು ಈ ಬಗ್ಗೆ ಬಿಜೆಪಿ ಮುಖಂಡ ಸುಬ್ರಮಣಿಯನ್​ ಸಲಿಂಗಕಾಮದಿಂದ ಎಚ್​ ಐವಿ ಹೆಚ್ಚಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪಿನ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಸುಬ್ರಮಣಿಯನ್​, ‘ಸಲಿಂಗಕಾಮದ ತೀರ್ಪಿನಿಂದ ದೇಶದಲ್ಲಿ ಲೈಂಗಿಕ  ಆರೋಗ್ಯಕ್ಕೆ ಸಂಬಂಧ ಪಟ್ಟ ಎಚ್​ ಐವಿ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ.  ಸಲಿಂಗಕಾಮ ಎನ್ನುವುದು ಅನುವಂಶೀಯ ಅಸ್ವಸ್ಥತೆ.  ಅಷ್ಟಕ್ಕೂ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅಂತಿಮವಲ್ಲ,  ತೀರ್ಪನ್ನು ಪ್ರಶ್ನಿಸಿ 7 ಮಂದಿ ನ್ಯಾಯಾಧೀಶರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ’ ಎಂದು ತಿಳಿಸಿದ್ರು.

subramanian swamy ಗೆ ಚಿತ್ರದ ಫಲಿತಾಂಶ

‘ಇನ್ನು ಈ ತೀರ್ಪಿನಿಂದ ಅಮೆರಿಕ ದೇಶದಲ್ಲಿರುವ ಸಂಸ್ಕೃತಿ ನಮ್ಮ ದೇಶದಲ್ಲೂ ಹೆಚ್ಚಾಗುವ ಸಾಧ್ಯತೆ ಇದ್ದು,  ಇನ್ನು ಮುಂದೆ ಸಲಿಂಗಕಾಮದ ಬಾರ್ ಗಳು ಆರಂಭವಾಗಬಹುದು. ಇದು ದೇಶದ ಭದ್ರತೆಗೆ ಮಾರಕವಾಗಬಹುದು, ನನಗೆ ಗೊತ್ತಿದೆ ಹಲವರು ನ್ಯಾಯಾಧೀಶರು ಸಲಿಂಗಕಾಮಿಗಳಾಗಿದ್ದಾರೆ. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಶಿಶುಕಾಮಿಗಳ ಸಂಖ್ಯೆ ಹೆಚ್ಚಾಗಬಹುದು’ ಎಂದು  ಸುಬ್ರಮಣಿಯನ್ ಸ್ವಾಮಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com