ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ – ಗಜಪಡೆಯ ತಾಲೀಮು ಆರಂಭ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ದಿನಗಣನೆ ಆರಂಭಗೊಂಡಿದೆ. ದಸರಾ ಉತ್ಸವದಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಅಂಬಾರಿ ಮೆರವಣಿಗೆಗೆ ಸಿದ್ಧತೆ ಆರಂಭಗೊಂಡಿದ್ದು, ಅಂಗವಾಗಿ ಗಜಪಡೆಯ ತಾಲೀಮು ಶುರುವಾಗಿದೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡದ ತಾಲೀಮು ನಡೆಸಲಾಗುತ್ತಿದ್ದು, ಅರಮನೆ ಅಂಗಳದಿಂದ ಗಜಪಡೆ ಹೊರಟಿದೆ.

ಕ್ಯಾಪ್ಟನ್ ಅರ್ಜುನ ನೇತೃತ್ವದ ಜಂಬೋಪಡೆ ಕೆ.ಆರ್.ವೃತ್ತ, ಆಯುರ್ವೇದ ವೃತ್ತ, ಸಯ್ಯಾಜಿರಾವ್ ರಸ್ತೆ, ಬೊಂಬು ಬಜಾರ್ , ಹೈವೇ ವೃತ್ತದ ಮೂಲಕ ಬನ್ನಿಮಂಟಪದವರೆಗೆ ಸಾಗಲಿದೆ. ಎರಡು ದಿನಗಳ ಹಿಂದೆ ಅರಮನೆಗೆ ಗಜಪಡೆಯ ಪ್ರವೇಶವಾಗಿತ್ತು.

Leave a Reply

Your email address will not be published.