ಪ್ರೇಮ‌ ವಿವಾಹಕ್ಕೆ ವಿರೋಧ : ಹುಡುಗಿಯ ಪೋಷಕರಿಂದ ಹುಡುಗನ ಮನೆ ದ್ವಂಸ..!

ಕೋಲಾರ : ಪ್ರೇಮ‌ ವಿವಾಹವನ್ನು ವಿರೋಧಿಸಿದ ಹುಡುಗಿಯ ಮನೆಯವರು ಹುಡುಗನ ಮನೆ ಧ್ವಂಸ ಮಾಡಿರುವ ಘಟನೆ ಕೋಲಾರದ ಮಾಲೂರಿನಲ್ಲಿ  ನಡೆದಿದೆ.

ಹುಡುಗ, ಹುಡುಗಿ ಮದುವೆ ಮಾಡಿಕೊಂಡು ಮನೆಗೆ ಬಂದ‌ ಹಿನ್ನೆಲೆಯಲ್ಲಿ ಹುಡುಗಿಯ ಪೋಷಕರು ಹುಡುಗನ ಪೋಷಕರಿಗೆ ಥಳಿಸಿ ಮನೆಯನ್ನು ಧ್ವಂಸ ಮಾಡಿದ್ದಾರೆ. ಕೋಲಾರದ ಹುರಳಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. 25 ವರ್ಷದ ಶಶಿಕುಮಾರ್ ಹಾಗೂ 21 ವರ್ಷದ ರಮ್ಯ ಒಂದೇ ಗ್ರಾಮದವರು ಅದರಲ್ಲೂ ಅಕ್ಕಪಕ್ಕದ ಮನೆಯವರೇ ಆಗಿದ್ದು ಪ್ರೀತಿಸಿ ಮದುವೆಗಿದ್ರು.

ಈ ಮದುವೆಗೆ ಹುಡುಗಿ ಮನೆಯವರು ಬಿಲ್​ಕುಲ್​ ಒಪ್ಪಿಗೆ ನೀಡಲಿಲ್ಲ ಹಾಗೂ ಬೇರೆ ಬೇರೆ ಜಾತಿ ಎನ್ನೋ ಕಾರಣಕ್ಕೆ ಮದುವೆಯಾದ ಹುಡುಗನ  ಪೋಷಕರ ಮೇಲೆ ಹುಡುಗಿಯ ಕಡೆಯವರನ್ನು  ಥಳಿಸಿ, ‌ಮನೆ ಧ್ವಂಸ‌ ಮಾಡಿದ್ರು. ಈ ಘಟನೆಗೆ ಸಂಬಂಧ ಪಟ್ಟಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com