ಸಿಎಂ ಆದ ಬಳಿಕ ಮೊದಲ ಬಾರಿಗೆ ಉಡುಪಿ ಮಠಕ್ಕೆ ಭೇಟಿ : ಕೃಷ್ಣನ ದರ್ಶನ ಪಡೆದ ಹೆಚ್​ಡಿಕೆ

ಉಡುಪಿ : ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಪ್ರವಾಸದಲ್ಲಿದ್ರು, ಈ ವೇಳೆ ಬಿಡುವು ಮಾಡಿಕೊಂಡು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಕೃಷ್ಣನ ದರ್ಶನ ಪಡೆದಿದ್ದಾರೆ.

 ಉಡುಪಿಗೆ ಭೇಟಿ ನೀಡಿ ಕೃಷ್ಣಮಠಕ್ಕೆ ಭೇಟಿ ನೀಡಿಲ್ಲ ಅನ್ನೋ ಆರೋಪಕ್ಕೆ ಗುರಿಯಾಗಬಾರದು ಅನ್ನೋ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಕೃಷ್ಣಮಠಕ್ಕೆ ಔಪಚಾರಿಕ‌ ಭೇಟಿ ನೀಡಿ ದೇವರ ದರ್ಶನ ಹಾಗೂ ಪಲಿಮಾರು ಪರ್ಯಾಯ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಸಿಎಂ ತಮ್ಮ ಪೂರ್ವನಿಗದಿತ ಕಾರ್ಯಕ್ರಮಕ್ಕೂ ಮುನ್ನ ಮಠಕ್ಕೆ ಭೇಟಿ ನೀಡಿದರು. ಬಳಿಕ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕುಮಾರಸ್ವಾಮಿ ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಶೀಘ್ರ ಕಾರ್ಯಗಳನ್ನು‌ ಅನುಷ್ಠಾನಕ್ಕೆ ಜಾರಿ ಮಾಡುವಂತೆ ಸೂಚಿಸಿದರು.

ಕಳೆದ ಸರಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಉಡುಪಿಗೆ ಮೂರ್ನಾಲ್ಕು ಬಾರಿ ಬಂದರೂ ಕೃಷ್ಣಮಠಕ್ಕೆ ಬಂದಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಈ ಆರೋಪದಿಂದ ಕುಮಾರಸ್ವಾಮಿ ತಪ್ಪಿಸಲೇಂದೆ ಪೂರ್ವನಿಗದಿತ ಕಾರ್ಯಕ್ರಮವನ್ನೂ ಮೀರಿ ಮಠಕ್ಕೆ  ಭೇಟಿ ನೀಡಿದ್ದು ವಿಶೇಷ ಎನ್ನಬಹುದು.

Leave a Reply

Your email address will not be published.

Social Media Auto Publish Powered By : XYZScripts.com