‘ಬೆಳಗಾವಿ ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ’ : ಈಶ್ವರ್​ ಖಂಡ್ರೆ ಸ್ಪಷ್ಟನೆ

ಬೆಳಗಾವಿ : ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಇದರಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಪಿ.ಎಲ್​.ಡಿ. ಬ್ಯಾಂಕ್​ ಚುನಾವಣೆ ಅಧ್ಯಕ್ಷರ ಆಯ್ಕೆ ಬಗ್ಗೆ ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈಶ್ವರ್​ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.

eshwar khandre in belagavi meeting ಗೆ ಚಿತ್ರದ ಫಲಿತಾಂಶ

‘ಸಚಿವ ರಮೇಶ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮಾತನಾಡಿ ಅತ್ಯಂತ ಸೌಹಾರ್ದತೆಯಿಂದ ಈ ವಿಷಯವನ್ನು ಬಗೆಹರಿಸಲಾಗಿದೆ, ಇದರಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಮಹಾದೇವ ಪಾಟೀಲ
ಉಪಾಧ್ಯಕ್ಷರಾಗಿ ಬಾಪುಸಾಬ ಜಮಾದಾರ ಆಯ್ಕೆಯಾಗಿದ್ದಾರೆ. ಈ ಆಯ್ಕೆಗೆ ಎಲ್ಲರ ಸಹಮತವಿದೆ. ಹೀಗಾಗಿ ವರಿಷ್ಠರ ಸೂಚನೆ ಮೇರೆಗೆ ಈ ಆಯ್ಕೆ ನಡೆದಿದೆ. ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಇದರಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಹಾಗೂ ಸಮಸ್ಯೆ ಇಲ್ಲ, ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ಸಣ್ಣ ಚುನಾವಣೆ. ಸೌಹಾರ್ದತೆಯಿಂದ ಬಗೆಹರಿಸಲಾಗಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಇರಲಿದೆ’ ಎಂದು ಈಶ್ವರ್​ ಖಂಡ್ರೆ ಸುದ್ದಿಗೊಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

eshwar khandre in belagavi meeting ಗೆ ಚಿತ್ರದ ಫಲಿತಾಂಶ

 

 

Leave a Reply

Your email address will not be published.