ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ.? : ಮುನ್ಸೂಚನೆ ನೀಡಿದ ಜಿ.ಟಿ ದೇವೇಗೌಡ

ರಾಮನಗರದಲ್ಲಿ ಇಂದು ನಡೆದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗುವ ಮುನ್ಸೂಚನೆ ನೀಡಿದರು.

ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ‘ ರಾಮನಗರ ಕ್ಷೇತ್ರ ಶಾಸಕರಿಲ್ಲದೇ ಆನಾಥವಾಗಿದೆ. ಈಗಾಗಲೇ ಕುಮಾರಸ್ವಾಮಿ ಯವರಿಂದ ಈ ಕ್ಷೇತ್ರ ರಾಮರಾಜ್ಯವಾಗಿದೆ. ಇಲ್ಲಿ ರಾಮನಾಗಿ ಹೆಚ್.ಡಿ.ಕುಮಾರಸ್ವಾಮಿ ಇದ್ದಾರೆ ಈ ಕ್ಷೇತ್ರಕ್ಕೆ ಸೀತಾಮಾತೆಯ ಅವಶ್ಯಕತೆ ಇದೆ.ಆ ಸೀತೆಯನ್ನ ನಿವೆಲ್ಲಾ ಬರಮಾಡಿಕೊಳ್ಳಬೇಕು ‘ ನೆರೆದಿದ್ದ ಜನತೆಯಲ್ಲಿ ಮನವಿಮಾಡಿಕೊಂಡರು.

ಈ ಮೂಲಕ ಮುಂಬರುವ ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅನಿತಾ ಅಭ್ಯರ್ಥಿ ಎಂಬುದು ಖಚಿತವಾಗಿದೆ.ಇದೇ ವೇಳೆ ಜಿ.ಟಿ.ಡಿ ಹೇಳಿಕೆಗೆ ವೇದಿಕೆಯಲ್ಲಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com