ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ಕೋರ್ಟ್​ ಐತಿಹಾಸಿಕ ತೀರ್ಪು…!

ನವದೆಹಲಿ : ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಮೂಲಕ 17 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. 1860ರ ಬ್ರಿಟಿಷ್​ ಕಾಲದ ಈ ಕಾನೂನಿಗೆ ಇಂದು ತೆರೆ ಬಿದ್ದಿದೆ.

ಪರಸ್ಪರ ಒಪ್ಪಿಗೆಯ ಸಲಿಂಗಕಾಮ ಕಾನೂನು ಬದ್ಧ ಎಂದು ಸುಪ್ರೀಂ ಆದೇಶ ಹೊರಡಿಸಿದೆ. 156 ವರ್ಷಗಳ ವಿವಾದಿತ 377 ಕಾಯ್ದೆಯನ್ನು  ವಿಚಾರಣೆ ನಡೆಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದೆ. ಭಾರತದಲ್ಲಿ ಸಲಿಂಗಕಾಮ ಅಪರಾಧವೋ ಅಥವಾ ಇಲ್ಲವೋ ಎಂದು ಪರಿಗಣಿಸುವ, ಭಾರತೀಯ ಐಪಿಸಿ ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಐಪಿಸಿ ಸೆ.377 ಅದರೆ ಏನು.. ‘377 ಸೆಕ್ಷನ್​ ಪ್ರಕಾರ ಅನೈಸರ್ಗಿಕವಾಗಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ  ಅಪರಾಧ ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷ ವರೆಗಿನ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು’

 

Leave a Reply

Your email address will not be published.

Social Media Auto Publish Powered By : XYZScripts.com