ಕಾಬೂಲ್​ನಲ್ಲಿ ಅವಳಿ ಬಾಂಬ್​ ದಾಳಿ : ಪತ್ರಕರ್ತರೂ ಸೇರಿ 20 ಜನರ ದುರ್ಮರಣ..!

ಕಾಬೂಲ್​ : ಕಾಬೂಲ್​ನ ಸ್ಪೋರ್ಟ್ಸ್​ ​ ಕ್ಲಬ್​ನಲ್ಲಿ ಭೀಕರ ಅವಳಿ ಬಾಂಬ್​ ದಾಳಿಯಿಂದ 20ಮಂದಿ ಸಾವನ್ನಪ್ಪಿದ್ದು, 70 ಜನರಿಗೆ ಗಂಭೀರ ಗಾಯವಾಗಿದೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ​ನಲ್ಲಿ ಇದು ಎರಡನೇಯ ಬಾಂಬ್​ ದಾಳಿಯಾಗಿದ್ದು,  ನೆನ್ನೆ ರಾತ್ರಿ  ದಾತ್​-ಇ-ಬರ್ಚಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ತುರ್ತು ಸೇವಾಕರ್ತರು ಹಾಗೂ ಮಾಧ್ಯಮದವರನ್ನು ಗುರಿಯಲ್ಲಿಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಪೋರ್ಟ್ಸ್‌ ಕ್ಲಬ್ ನಲ್ಲಿ ನಡೆದ  ಭೀಕರ ಬಾಂಬ್​ ದಾಳಿಗೆ  ಮಾಧ್ಯಮದವರು ಸೇರಿ 20 ಜನರು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು,  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

First explosion was triggered by a suicide bomber and was followed by a car bomb shortly after [Rahmat Gul/AP]

ಸ್ಫೋಟದಲ್ಲಿ ಉಗ್ರರು ಮೊದಲು ತಮ್ಮನ್ನು  ತಾವು ಸ್ಫೋಟಿಸಿಕೊಂಡಿದ್ದು, ಈ ವೇಳೆ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿದ್ದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲೇ ಕಾರಿನಲ್ಲಿ ಇಡಲಾಗಿದ್ದ ಮತ್ತೊಂದು ಬಾಂಬ್ ಅನ್ನು ಸ್ಫೋಟಿಸಲಾಗಿದೆ ಎಂದು ತಿಳಿದುಬಂದಿದೆ

 

Leave a Reply

Your email address will not be published.

Social Media Auto Publish Powered By : XYZScripts.com