ತುಮಕೂರು : ಲಾರಿಗೆ ಡಿಕ್ಕಿ ಹೊಡೆದ ಕ್ಯಾಂಟರ್​ : ಇಬ್ಬರ ಸಾವು, ಒಬ್ಬನಿಗೆ ಗಂಭೀರ ಗಾಯ..!

ತುಮಕೂರು : ಬೆಳ್ಳಂ ಬೆಳಗ್ಗೆ ರಸ್ತೆ ಬದಿ ನಿಂತಿದ್ದ ಲಾರಿಗೆ ಈರುಳ್ಳಿ ತುಂಬಿದ ಕ್ಯಾಂಟರ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ  ತುಮಕೂರಿನ ಶಿರಾ ಹೆದ್ದಾರಿಯಲ್ಲಿ ನಡೆದಿದೆ.

ಶಿರಾ ಹೊರವಲಯದ ಜೈ ಹಿಂದ್ ಹೋಟಲ್ ಬಳಿ ನಿಂತಿದ್ದ ಲಾರಿಗೆ ಈರುಳ್ಳಿ ತುಂಬಿದ ಕ್ಯಾಂಟರ್ ವಾಹನ ಡಿಕ್ಕಿವೊಡೆದ ಪರಿಣಾಮ ಕ್ಯಾಂಟರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು,  ಕ್ಲೀನರ್​ಗೆ ಗಂಭೀರ ಗಾಯವಾಗಿದೆ.  ಡಿಕ್ಕಿಯ ರಭಸಕ್ಕೆ ವಾಹನದಲ್ಲೇ ಸಿಲುಕಿಕೊಂಡ ಮೃತ ದೇಹಗಳ ಹೊರ ತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.

ಹುನಗುಂದದ ರಮೇಶ್ ಮೃತ ದುರ್ದೈವಿಯಾಗಿದ್ದು, ಕ್ಲೀನರ್ ಶ್ರೀನಿವಾಸ್​ಗೆ ಗಂಭೀರ ಗಾಯವಾಗಿದೆ. ಇನ್ನು ಮೃತ ಈರುಳ್ಳಿ ಮಾಲೀಕನ ಗುರುತು ಪತ್ತೆಯಾಗಿಲ್ಲಾ ಎನ್ನಲಾಗಿದೆ. ಈ ಘಟನೆ ಸಂಬಂಧ ಪಟ್ಟಂತೆ ಶಿರಾ ಪೋಲೀಸರು ಸ್ಥಳಕ್ಕೆ ಭೇಟಿ  ನೀಡಿ  ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಶಿರಾ ಹೆದ್ದಾರಿಯಲ್ಲಿ ಸಾವಿನ ಸರಣಿ ಮುಂದುವರೆಯುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com