Cricket : ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ವೇಗಿ ಆರ್.ಪಿ ಸಿಂಗ್..

ಟೀಮ್ ಇಂಡಿಯಾದ ಎಡಗೈ ವೇಗಿ ರುದ್ರ ಪ್ರತಾಪ್ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದಲೂ ವಿದಾಯ ಹೇಳಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಈ ವಿಷಯ ತಿಳಿಸಿರುವ ಆರ್.ಪಿ ಸಿಂಗ್ ನಿವೃತ್ತಿಯ ಕುರಿತು ಭಾವುಕರಾಗಿದ್ದಾರೆ.

‘ 13 ವರ್ಷಗಳ ಹಿಂದೆ ನಾನು ಮೊಟ್ಟ ಮೊದಲ ಬಾರಿ ಟೀಮ್ ಇಂಡಿಯಾ ಜೆರ್ಸಿ ಧರಿಸಿದ್ದೆ. ಅದು ನನ್ನ ಜೀವನದ ಅದ್ಭುತ ಕ್ಷಣಗಳಲ್ಲಿ ಒಂದಾಗಿತ್ತು. ಇಷ್ಟು ವರ್ಷಗಳ ನನ್ನ ಕ್ರಿಕೆಟ್ ಪಯಣ ಸಾಧ್ಯವಾಗಲು ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಬಯಸುತ್ತೇನೆ. ಗುಡ್ ಬೈ ಹೇಳುವುದು ಅಷ್ಟು ಸುಲಭವಲ್ಲ, ನಿವೃತ್ತಿಗೆ ಇದು ಸರಿಯಾದ ಸಮಯ ಎನಿಸಿದ್ದರಿಂದ, ವಿದಾಯ ಹೇಳುತ್ತಿದ್ದೇನೆ ‘ ಎಂದು ಆರ್.ಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.

2005 ರಲ್ಲಿ ಜಿಂಬಾಬ್ವೆ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಆರ್.ಪಿ ಸಿಂಗ್, 58 ಏಕದಿನ ಪಂದ್ಯಗಳನ್ನಾಡಿ 69 ವಿಕೆಟ್ ಪಡೆದಿದ್ದಾರೆ. 2006ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟ ಆರ್.ಪಿ ಸಿಂಗ್ 14 ಟೆಸ್ಟ್ ಪಂದ್ಯಗಳಲ್ಲಿ 40 ವಿಕೆಟ್ ಪಡೆದಿದ್ದಾರೆ. ಆರ್.ಪಿ ಸಿಂಗ್, 2007ರಲ್ಲಿ ಟಿ-20 ವಿಶ್ವಕಪ್ ಜಯಿಸಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡದ ಸದಸ್ಯರಾಗಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com