ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಶಾಸಕ ರಹೀಂ ಖಾನ್ : ಸಮ್ಮಿಶ್ರ ಸರ್ಕಾರಕ್ಕೆ ಹೊಸ ತಲೆನೋವು.?

ಬೀದರ್ : ಸಚಿವ ಸಂಪುಟ ವಿಸ್ತರಣೆಗೆ ಸಮನ್ವಯ ಸಮಿತಿ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ  ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ್ದಾರೆ.

‘ ಮುಂಬೈ ಕರ್ನಾಟಕ ಮತ್ತು ಹೈದ್ರಬಾದ್ ಕರ್ನಾಟಕದಲ್ಲಿ ಮೈನಾರಟಿನವರು ಯಾರು ಇಲ್ಲ. ಈ ಎರಡು ಭಾಗದಲ್ಲಿ 15 ಎಂಪಿ, 100 ಎಮ್ ಎಲ್ ಗಳಿದ್ದಾರೆ. ಈ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಕಡಗಣಿಸಲಾಗಿದೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆ ಇರೋದ್ರಿಂದ ಸಚಿವ ಸ್ಥಾನ ನೀಡೋ ಭರವಸೆ ಇದೆ. ನಾನು ಕೂಡ ರಾಜ್ಯ ನಾಯಕರಲ್ಲಿ‌ ಸಚಿವ ಸ್ಥಾನದ ಬಗ್ಗೆ ಹೇಳಿದ್ದೇನೆ, ಈ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ‘ ಎಂದಿದ್ದಾರೆ.

ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿದೆ. ಅಲ್ಲದೇ ರಾಜ್ಯದಲ್ಲಿ ದೊಡ್ಡ ನಾಯಕರನ್ನು ಹಿಡಿದು ಕೊಂಡು ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೀಗಿರುವಾಗ ಶಾಸಕ ರಹೀಮ್ ಖಾನ್ ಗೆ ಸಚಿವ ಸ್ಥಾನ ಸಿಗುತ್ತಾ..? ಎಂಬುದು ಪ್ರಶ್ನೆಯಾಗಿದೆ. ಸಚಿವ ಸ್ಥಾನದ ಆಸೆ ವ್ಯಕ್ತಪಡಿಸುವ ಮೂಲಕ ಶಾಸಕ ರಹೀಂ ಖಾನ್ ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಸಮ್ಮಿಶ್ರ ಸರ್ಕಾರಕ್ಕೆ ಹೊಸ ತಲೆನೋವು ತಂದಿಟ್ಟಿದ್ದಾರಾ ಎಂಬ ಅನುಮಾನ ಮೂಡಿದೆ.

Leave a Reply

Your email address will not be published.