ಬಿಜೆಪಿಯವ್ರು ಹಗಲು ಕನಸು ಕಾಣುತ್ತಿದ್ದಾರೆ, ಯಾವ ಕಾರಣಕ್ಕೂ ಸರ್ಕಾರ ಬೀಳಲ್ಲ : ಎಂ.ಬಿ ಪಾಟೀಲ್

ವಿಜಯಪುರ : ಶ್ರಾವಣದ ನಂತ್ರ ಸಮ್ಮಿಶ್ರ ಸರ್ಕಾರ ಪತನವೆಂಬ‌ ಸರ್ಕಾರ ಹೇಳಿಕೆ ವಿಚಾರವಾಗಿ ವಿಜಯಪುರದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ‘ ಬಿಜೆಪಿ ಯವರು ಹಗಲು ಕನಸು ಕಾಣ್ತಿದ್ದಾರೆ. ಸರ್ಕಾರ ಯಾವ ಕಾರಣಕ್ಕೂ ಪತನವಾಗೋದಿಲ್ಲ ‘ ಎಂದಿದ್ದಾರೆ.

ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಿ ಮಾತನಾಡಿದ ಎಂ ಬಿ ಪಾಟೀಲ ‘ ಹಗಲು ಕನಸು ಸತ್ಯವಾಗೋದಿಲ್ಲ. ಆಪರೇಶನ್ ಕಮಲ ಮಾಡಿದ್ರೆ ಅದು ಪ್ರಜಾಪ್ರಭುತ್ವದ ಕಗ್ಗೋಲೆ, ಆಪರೇಶನ್ ಗೆ ಯಾರು ಬಲಿಯಾಗೋದಿಲ್ಲ ‘ ಎಂದರು.

ಸರ್ಕಾರ ಪತನದ ಕುರಿತು ಯತ್ನಾಳ ಭವಿಷ್ಯ ವಿಚಾರವಾಗಿ ಮಾತನಾಡಿದ ಅವರು ‘ ಯತ್ನಾಳ ಮಾತನಾಡುವುದಕ್ಕೆಲ್ಲ ನಾನು ಪ್ರತಿಕ್ರೊಯಿಸೋದಿಲ್ಲ, ಭವಿಷ್ಯ ಸತ್ಯವಾಗುತ್ತೋ ಸುಳ್ಳಾಗುತ್ತೋ ಕಾದುನೋಡಿ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com