ಪರಿಹಾರ ಕೇಂದ್ರದಲ್ಲಿ ವಾರಿಜಾ ವಿವಾಹ : ನೋವನ್ನು ಮರೆತು ಮದುವೆ ಸಂಭ್ರಮದಲ್ಲಿ ತೊಡಗಿದ ಸಂತ್ರಸ್ತರು  

ಮಂಗಳೂರು : ಪ್ರಕೃತಿ ವಿಕೋಪದ ನೋವಿನ ನಡುವೆಯೂ ಮಡಿಕೇರಿಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ.  ಜಲಪ್ರಳಯದಿಂದ ಮನೆಯನ್ನು ಕಳೆದುಕೊಂಡಿದ್ದ ವಾರಿಜಾ ಹಾಗೂ ಪುಣೆಯ ರುದ್ರೇಶ್ ವಿವಾಹ ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ನಡೆಯುತ್ತಿದೆ.

ಕೊಡಗಿನಲ್ಲಾದ ಜಲಪ್ರಳಯದಿಂದ ಮನೆ ಕಳೆದುಕೊಂಡು ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ವಾರಿಜಾ ಕುಟುಂಬ ಸ್ಥಳೀಯರ ಸಹಕಾರದಿಂದ ವಿವಾಹ ಮಾಡುತ್ತಿದ್ದರೆ. ನೆನ್ನೆ ರಾತ್ರಿ ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಮೆಹಂದಿ ಶಾಸ್ತ್ರ ನಡೆದಿತ್ತು, ಇಂದು ಸರಳವಾಗಿ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆ ನಡೆಯುತ್ತಿದೆ.

ಮನೆಯಲ್ಲಿ ಸಂಭ್ರಮದಿಂದ ನಡೆಯಬೇಕಾಗಿದ್ದ ಯುವತಿ ವಾರಿಜಾ ಮದರಂಗಿ ಶಾಸ್ತ್ರ, ನಿನ್ನೆ ರಾತ್ರಿ ಕಲ್ಲುಗುಂಡಿ ಪರಿಹಾರ ಕೇಂದ್ರದಲ್ಲಿ ಎಲ್ಲರ ಸಮ್ಮುಖದಲ್ಲಿ ನಡೆಯಿತು. ಊರ ಗ್ರಾಮಸ್ಥರು, ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದುಕೊಳ್ಳುತ್ತಿರೋ ಎಲ್ಲಾ ಧರ್ಮೀಯ ಜನರೂ ಈ ಮದರಂಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಜಿಲ್ಲೆಯ ಅಧಿಕಾರಿಗಳು, ಊರವರು ಸೇರಿ ಸಂಭ್ರಮದ ಮದರಂಗಿ ಶಾಸ್ತ್ರಕ್ಕೆ ಸಾಕ್ಷಿಯಾಗಿ ನವವಧು ವಾರಿಜಾಳಿಗೆ ಶುಭ ಹಾರೈಸಿದರು. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರೋ ವಾರಿಜಾ ಇಂದು ಮಡಿಕೇರಿಯಲ್ಲಿ  ಪುಣೆ ಮೂಲದ ಯುವಕ ರುದ್ರೇಶ್ ಎಂಬುವವರ ಜೊತೆ ಹಸೆಮಣೆ ಏರಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com