Kolkata : ಹೊಟೇಲ್ ರೂಮ್‍ನಲ್ಲಿ ಶವವಾಗಿ ಪತ್ತೆಯಾದ ಬಂಗಾಳಿ ನಟಿ ಪಾಯಲ್..!

ಪಶ್ಚಿಮ ಬಂಗಾಳದ ಸಿಲಿಗುರಿಯ ಹೊಟೇಲ್ ನಲ್ಲಿ ಬುಧವಾರ ಸಾಯಂಕಾಲ ಬಂಗಾಳಿ ಕಿರುತೆರೆ ಹಾಗೂ ಚಿತ್ರನಟಿ ಪಾಯಲ್ ಚಕ್ರವರ್ತಿ ಶವ ಪತ್ತೆಯಾಗಿದೆ. ನಟಿ ಪಾಯಲ್ ಸಾವಿನ ಸುದ್ದಿ ತಿಳಿದ ನಂತರ ಆಕೆಯ ಸಹ ಕಲಾವಿದರು ಹಾಗೂ ಚಿತ್ರರಂಗದ ಜನರಿಗೆ ಅಘಾತವಾಗಿದೆ. ಇತ್ತೀಚೆಗಷ್ಟೇ ತಮ್ಮ ವಿಚ್ಛೇದನ ಪಡೆದಿದ್ದ ಪಾಯಲ್ ಒಬ್ಬ ಮಗನನ್ನು ಅಗಲಿದ್ದಾರೆ.

ಸ್ಥಳೀಯ ವರದಿಗಳ ಪ್ರಕಾರ ಪಾಯಲ್ ಚಕ್ರವರ್ತಿ ಮಂಗಳವಾರ ಬಂದು ಹೊಟೇಲ್ ರೂಮ್ ನಲ್ಲಿ ತಂಗಿದ್ದರು. ಬುಧವಾರ ಸಿಕ್ಕಿಂ ರಾಜಧಾನಿಯಾದ ಗ್ಯಾಂಗ್ಟಕ್ ಗೆ ಹೊರಡುವವರಿದ್ದರು. ಎಷ್ಟು ಹೊತ್ತಾದರೂ ರೂಮಿನ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಹೊಟೇಲ್ ಸಿಬ್ಬಂದಿ, ಬಾಗಿಲನ್ನು ಮುರಿದು ಒಳ ಪ್ರವೇಶಿಸಿದಾಗ ಪಾಯಲ್ ಶವ ದೊರೆತಿದೆ.

Image result for payel chakraborty actress dead body

ಪ್ರತಿಭಾವಂತ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿದ್ದ ಪಾಯಲ್ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಹಾಗೂ ಚಿತ್ರಗಳಲ್ಲಿ ಅಭಿನಯಿಸಿದ್ದರು.

Leave a Reply

Your email address will not be published.