‘ನಾನು‌ ನಗರದ ನಕ್ಸಲೈಟ್​’ ಎಂಬ ಬೋರ್ಡ್‌ ಹಾಕಿಕೊಂಡಿರುವುದು ಕಾನೂನು ಬಾಹಿರ : ಪ್ರಮೋದ್​ ಮುತಾಲಿಕ್​

ಚಿಕ್ಕಮಗಳೂರು :  ನಿನ್ನೆ ಬೆಂಗಳೂರಿನಲ್ಲಿ ಗೌರಿ ಲಂಕೇಶ್ ರ ಹತ್ಯೆಯಾಗಿ ವರ್ಷ ಕಳೆದ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾನು‌ ನಗರದ ನಕ್ಸಲೇಟ್ ಎಂಬ ಬೋರ್ಡ್‌ ಹಾಕಿಕೊಂಡಿದ್ದು ಕಾನೂನು ಬಾಹಿರ ಎಂದು ಚಿಕ್ಕಮಗಳೂರಿನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಖ್ ಹೇಳಿಕೆ ನೀಡಿದ್ದಾರೆ.

ಸಂಬಂಧಿತ ಚಿತ್ರ

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಪ್ರಮೋದ್​ ಮುತಾಲಿಖ್​,  ‘ನಕ್ಸಲ್ ಬ್ಯಾನ್ ಆರ್ಗನೈಜ್ಡ್ ಅವರ ಪರವಾಗಿ ನಿಂತಿರುವುದು ದೊಡ್ಡ ಅಪರಾಧ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹಕ್ಕಾಗಿ ವಿಶೇಷ ಪಡೆಯಿದೆ, ಯಾರು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಾರೋ ಅವರನ್ನ ಹತ್ತಿಕ್ಕಲು ಸರ್ಕಾರವೇ ರಚಿಸಿದ ತಂಡವಿದು. ಇನ್ನೂ ಕಾರ್ಯಕ್ರಮದಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ, ರೆಹಮತ್ ತರೀಕೆರೆ ಮೊದಲಾದವರು ಭಾಗಿಯಾಗಿದ್ರು’ ಎಂದು ತಿಳಿಸಿದ್ರು.

‘ನಗರ ನಕ್ಸಲ್ ಎನ್ನುವುದರ ಅರ್ಥದಲ್ಲಿ ಇವರು ಕಾಡಿನಲ್ಲಿರುವವರಿಗೆ ಸಹಕಾರ ನೀಡುತ್ತಿದ್ದಾರೆಂಬ ಸಂಶಯವಿದೆ, ಹೀಗಾಗಿ  ನಾನು ನಗರದ ನಕ್ಸಲ್​ ಎಂದು ನಿನ್ನೆ  ಗೌರಿ ಲಂಕೇಶ್​ ಕಾರ್ಯಕ್ರಮದಲ್ಲಿ ಬೋರ್ಡ್​ ಹಾಕಿಕೊಂಡ ಸಾಹಿತಿ, ಚಿಂತಕರುಗಳ ಮೇಲೆ ಸುಮೋಟೋ ಕೇಸ್ ದಾಖಲಿಸಿ, ಎಂದು ಪ್ರಮೋದ್ ಮುತಾಲಿಖ್‌ ಆಗ್ರಹಿಸಿದ್ರು.

ಇತ್ತೀಚೆಗೆ ಹೈದರಾಬಾದ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಹೈದ್ರಾಬಾದ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಆ ಆರೋಪಿಗಳು ಚಿಕ್ಕಮಗಳೂರಲ್ಲಿ ತರಬೇತಿ ಪಡೆದು ಸಹಕಾರ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಕಾಫಿನಾಡು ಬಾಂಗ್ಲಾ ವಲಸಿಗರು ಸೇರಿದಂತೆ ಭಯೋತ್ಪಾದಕರ ಸೆಂಟರ್ ಆಗುವ ಭಯವಿದೆ ಎಂದು ಚಿಕ್ಕಮಗಳೂರಿನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಖ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com