ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ಶಾಸಕ ಆನಂದ್​ ಸಿಂಗ್​..

ಚುನಾವಣಾ ರಾಜಕೀಯದಿಂದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್​ ಸೇರಿದ್ದ ಆನಂದ್ ಸಿಂಗ್ ಬಳ್ಳಾರಿಯ ವಿಜಯನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.​

ಇನ್ನು ಮುಂದೆ ಚುನಾವಣೆಗೆ ಸ್ಪರ್ಥಿಸುವುದಿಲ್ಲವೆಂದು ಘೋಷಣೆ ಮಾಡಿರುವ ಆನಂದ್ ಸಿಂಗ್ ‘ ಚುನಾವಣೆಗೆ ಸ್ಪರ್ಥಿಸುವುದಿಲ್ಲ, ಆದರೆ ಸಕ್ರಿಯ ರಾಜಕಾರಣದಲ್ಲಿರುತ್ತೇನೆ ‘ ಎಂದು ಹೇಳಿದ್ದಾರೆ.

‘ ಮೂರು ಬಾರಿ ಶಾಸಕನಾಗಬೇಕೆಂಬ ಹಠವಿತ್ತು ಅದರಂತೆ ಆಯ್ಕೆಯಾಗಿದ್ದೆ. ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಥೆ ಮಾಡುವುದಿಲ್ಲ. ಬೇರೆಯವರ ಸ್ಪರ್ಥೆಗೆ ಅವಕಾಶ ನೀಡುವ ದೃಷ್ಠಿಯಿಂದ ನನ್ನ ಸ್ಪರ್ಥೆಯಿಲ್ಲ ‘ ಎಂದು ಹೊಸಪೇಟೆಯಲ್ಲಿ ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್​ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.