ನೆಚ್ಚಿನ ನಟನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವೆಂದು ಅಭಿಮಾನಿ ಆತ್ಮಹತ್ಯೆ..! ಯಾರು ಆ ನಟ..?

ವಿಜಯವಾಡ : ನೆಚ್ಚಿನ ನಟನನ್ನು ನೋಡಲು ಹಲವಾರು ಅಭಿಮಾನಿಗಳು ಹುಚ್ಚು ಸಾಹಸವನ್ನು ಮಾಡುತ್ತಿರುತ್ತಾರೆ, ಹಾಗೆಯೇ ಇಲ್ಲೊಬ್ಬ ಹುಚ್ಚು ಅಭಿಮಾನಿ ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ನೊಂದು ತನ್ನ ಪ್ರಾಣವನ್ನೇ ಬಲಿ ಕೊಟ್ಟಿದ್ದಾನೆ.

ವಿಜಯವಾಡದ ಕೊಮಟಾವೆಲ್ಲಿಯ ಅನಿಲ್‌ ಕುಮಾರ್‌ ಎಂಬ ಯುವಕ  ತೆಲುಗಿನ ಪವರ್​ ಸ್ಟಾರ್​  ಪವನ್​ ಕಲ್ಯಾಣ್ ಅವರ ಹುಚ್ಚು ಅಭಿಮಾನಿಯಾಗಿದ್ದು, ಪವನ್​ ರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವೆಂದು ಡೆತ್​ ನೋಟ್​ ಬರೆದು ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

pawan kalyan sad ಗೆ ಚಿತ್ರದ ಫಲಿತಾಂಶ

ಅಭಿಮಾನಿ ಪತ್ರದಲ್ಲಿ, ‘ಪವನಣ್ಣ  ನೀವಂದ್ರೆ ನನಗೆ ಹುಚ್ಚು ಅಭಿಮಾನ. ಬದುಕಿರುವಾಗ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನಿಮ್ಮ ಕೈಯಾರೆ ನನ್ನ ಅಂತ್ಯಕ್ರಿಯೆ ನಡೆಯಬೇಕು ಇತೀ ನಿಮ್ಮ ಅನಿಲ್​… ಜನ ಸೇನಾನಿ’, ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

Anil Kumar

Leave a Reply

Your email address will not be published.