ವೇತನ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿ ಶಿಕ್ಷಕರ ಪ್ರತಿಭಟನೆ…!

ಮಂಗಳೂರು: ಶಿಕ್ಷಕರ ದಿನಾಚರಣೆಯಂದೆ ಶಿಕ್ಷಕರು ಪ್ರತಿಭಟನೆ‌ ಮಾಡುತ್ತಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕ್ಷೇತ್ರದ ಶಿಕ್ಷಣಾಧಿಕಾರಿ ಕಛೇರಿ ಮುಂದೆ ನಡೆದಿದೆ.

R.M.S.A ಶಾಲಾ ಶಿಕ್ಷಕಕರು ವೇತನ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿ  ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. 24 ಶಿಕ್ಷಕರು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸುತ್ತಿದ್ದು,  R.M.S.A ಅಂದ್ರೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಸಂಸ್ಥೆ.

ನಿನ್ನೆ ಐದು ಶಾಲೆಯ ಬೀಗ ತೆಗೆಯದೆ ಆರಂಭವಾಗಿದ್ದ ಧರಣಿ‌, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್ ಸ್ಥಳಕ್ಕೆ ಬಾರದಿದ್ದರಿಂದ ಇಂದು ಕೂಡ ಮುಂದುವರೆದಿದೆ ಎನ್ನಲಾಗುತ್ತಿದೆ. ವೇತನ ಬಿಡುಗಡೆಗೆ ಆದೇಶ ಮಾಡುವವರೆಗೆ ಧರಣಿ ಮುಂದುವರೆಸುತ್ತೇವೆಕಪ್ಪು ಪಟ್ಟಿ ಧರಿಸಿ ಉಗ್ರ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನಾ ಸ್ಥಳದಲ್ಲೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ್ರು.

Leave a Reply

Your email address will not be published.