ಕೊಪ್ಪಳ : 90ರ ಇಳಿವಯಸ್ಸಿನಲ್ಲೂ ಕುಂದದ ಓದಿನ ಉತ್ಸಾಹ – ಪಿಹೆಚ್‌ಡಿಗಾಗಿ ಪರೀಕ್ಷೆ ಬರೆದ ಅಜ್ಜ

ಕೊಪ್ಪಳ : 90 ರ ಇಳಿ ವಯಸ್ಸಿನ ಹಿರಿಯರೊಬ್ಬರು ಪಿಹೆಚ್‌ಡಿಗಾಗಿ‌ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಇಳಿ ವಯಸ್ಸಿನಲ್ಲೂ ಇವರ ಓದಿನ ಉತ್ಸಾಹ ಕುಂದಿಲ್ಲ. ಯುವ ಶಿಕ್ಷಕರನ್ನು ನಾಚಿಸುವಂತೆ ಈ ನಿವೃತ್ತ ಶಿಕ್ಷಕ ಓಡಾಡುತ್ತಾರೆ.

ಕೊಪ್ಪಳದ ಬಿಸರಳ್ಳಿ ಗ್ರಾಮ ನಿವಾಸಿ ಈ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣ ಬಸವರಾಜ್ ಬಿಸರಳ್ಳಿ ಹಲವು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ನಿವೃತ್ತಿಯ ನಂತರವೂ ನಿರಂತರ ಅಧ್ಯಯನ ನಡೆಸಿರುವ ಇವರು ಹಂಪಿ ಕನ್ನಡ ವಿ.ವಿಯಲ್ಲಿ ಪಿಹೆಚ್‌ಡಿಗಾಗಿ ಪರೀಕ್ಷೆ ಬರೆದಿದ್ದಾರೆ.

ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದು, ಕಳೆದ ವರ್ಷವೂ ಪರೀಕ್ಷೆ ಬರೆದು ಪ್ರಯತ್ನಿಸಿದ್ದರು. ಉತ್ಸಾಹ ಕುಂದದೇ ಹಿರಿಯ ಜೀವಿ ಮತ್ತೊಮ್ಮೆ ಪ್ರವೇಶ ಪರೀಕ್ಷೆಯನ್ನು ಬರೆದಿದ್ದಾರೆ. ಈಗ ಪರೀಕ್ಷೆ ಬರೆದ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com