‘ನಿಮ್ಮ ಸಂಸದರ ರಿಪೋರ್ಟ್​ ಕಾರ್ಡ್​ ಬಿಡುಗಡೆ ಮಾಡಿಸಿ’ : ಕೈ ಕಾರ್ಯಕರ್ತರಿಗೆ ಪ್ರತಾಪ್​ ಸಿಂಹ ಚಾಲೆಂಜ್​ 

ಮೈಸೂರು : ‘ಬಿಜೆಪಿ ಸಂಸದರು ಎಷ್ಟು ಕೆಲಸ ಮಾಡಿದ್ದಾರೆ ಎಂದು ರಿಪೋರ್ಟ್ ಬಿಡುಗಡೆ ಮಾಡುತ್ತೇವೆ.‌ ನಿಮ್ಮ ಸಂಸದರ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿಸಿ’ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಾಪ್​ ಸಿಂಹ ಚಾಲೆಂಜ್ ಮಾಡಿದ್ರು.

ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್​ ಸಿಂಹ,’ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸಂಸದರು ಏನು ಮಾಡಿದ್ದಾರೆ. ಅವರು ಮಾಡಿರುವ ಕೆಲಸದ ಬಗ್ಗೆ  ರಿಪೋರ್ಟ್​ ಕಾರ್ಡ್​ ಬಿಡುಗಡೆ ಮಾಡಲಿ. ಬಿಜೆಪಿ ಸಂಸದರು ಎಷ್ಟು ಕೆಲಸ ಮಾಡಿದ್ದಾರೆ ಎಂದು ರಿಪೋರ್ಟ್ ಬಿಡುಗಡೆ ಮಾಡುತ್ತೇವೆ’  ಎಂದು ದೋಸ್ತಿ ಸರ್ಕಾರಕ್ಕೆ ಓಪನ್​ ಚಾಲೆಂಜ್​ ಹಾಕಿದ್ದಾರೆ.

ಸಂಬಂಧಿತ ಚಿತ್ರ

ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಹೆಸರೇಳದೆ ಅವರ ಕೆಲಸವನ್ನು ಪ್ರಶ್ನೆ ಮಾಡಿದ ಪ್ರತಾಪ್​ ಸಿಂಹ, ‘ನನ್ನ ವಿರುದ್ದ ಕಾಂಗ್ರೆಸ್ ಜೆ.ಡಿ.ಎಸ್. ಪಕ್ಷದವರು ಒಟ್ಟಿಗೆ ಸ್ಪರ್ಧಿಗಳನ್ನು ನಿಲ್ಲಿಸಿ, ಬಿಜೆಪಿ ಶಕ್ತಿ ಏನು ಎಂದು ತೋರಿಸುತ್ತೇವೆ ಎಂದು ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಚಾಲೆಂಜ್​ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com