ಪ್ರಧಾನಿಯನ್ನು ಭೇಟಿ ಮಾಡಿದ ಮೋಹನ್​ಲಾಲ್​ : ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಮಾಲಿವುಡ್​ ಸ್ಟಾರ್..?

ತಿರುವನಂತಪುರಂ : ಪ್ರಧಾನಿ ಮೋದಿಯನ್ನು ಮಾಲಿವುಡ್​ ಸೂಪರ್​ ಸ್ಟಾರ್​ ಮೋಹನ್​ ಲಾಲ್​ ಭೇಟಿ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಮೋಹನ್​ಲಾಲ್​ ತಮ್ಮ ಟ್ವಿಟರ್​​ನಲ್ಲಿ  ಹೇಳಿಕೊಂಡಿದ್ದಾರೆ.

ಸಿನಿಮಾ ಸ್ಟಾರ್​ಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗೆಯೇ ಮೋಹನ್​ಲಾಲ್​ ಕೂಡ ರಾಜಕೀಯ ಅಖಾಡಕ್ಕೆ ಇಳಿಯಲು ಸಿದ್ದರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೋಹನ್​ ಲಾಲ್​ ತಿರುವನಂತಪುರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.

 

ಮೋಹನ ಲಾಲ್​ ಮೋದಿಯನ್ನು ಭೇಟಿಯಾಗಿದ್ದನ್ನು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು, ಪ್ರಧಾನಿ ಮೋದಿಯವರನ್ನು ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಭೇಟಿ ಮಾಡಿದ್ದೇನೆ. ಈ ವೇಳೆ  ವಿಶ್ವಶಾಂತಿ ಫೌಂಡೇಶನ್​ ಹಾಗೂ ನಮ್ಮ ಬಹುಮುಖಿ ಸಾಮಾಜಿಕ ಕಾರ್ಯಗಳನ್ನು ಬಗ್ಗೆ​ ತಿಳಿಸಿದೆ ಹಾಗೂ  ಮೋದಿಯವರಿಗೆ ಗ್ಲೋಬಲ್​ ಮಲಯಾಳಿ ರೌಂಡ್​ಟೇಬಲ್​ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಹ್ವಾನವನ್ನು ನೀಡಿದ್ದೇನೆ. ಇನ್ನು ಪ್ರಧಾನಿ ಮೋದಿ ಕೇರಳಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೋಹನ್​ಲಾಲ್​ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com