ತೈಲ ಬೆಲೆ ಗಗನಕ್ಕೇರುತ್ತಿದ್ದರೂ ಕೇಂದ್ರ ಸರ್ಕಾರ ಸುಮ್ಮನಿದೆ, ಇದೇನಾ ಅಚ್ಛೇ ದಿನ್..? : ಜಮೀರ್ ವಾಗ್ದಾಳಿ

ಹುಬ್ಬಳ್ಳಿ : ‘ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆರುತ್ತಿದೆ. ಆದರೂ ಕೇಂದ್ರ ಸರ್ಕಾರ ಸುಮ್ಮನಿದೆ. ಪ್ರಧಾನಿ ಮೋದಿ ಅಚ್ಛೆ ದಿನ್ ಅಂದಿದ್ರು. ಇದೇನಾ ಅಚ್ಛೆ ದಿನ್..? ‘ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.

ನಗರದ ವಿಮಾನ‌ ನಿಲ್ದಾಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಸಚಿವ ಜಮೀರ್ ಕಿಡಿಕಾರಿದ್ದಾರೆ. ‘ ಮನ್ ಕೀ ಬಾತ್ ಅಂತಿದ್ರು, ನಮಗೆ ಮನ್ ಕೀ ಬಾತ್ ಬೇಕಿಲ್ಲ ಕಾಮ್ ಕೀ ಬಾತ್ ಬೇಕಿದೆ. ಜನರಿಗೆ ಕೇಂದ್ರ ಸರ್ಕಾರದ ಆಡಳಿತ ಅರಿವಾಗಲಿ ಅಂತ ಸುಮ್ಮನಿದ್ದೇವೆ. ಜನರಿಗೆ ಕೇಂದ್ರ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಅರ್ಥವಾಗಬೇಕು. ನಾವು ಹಿಂದಿನಿಂದಲೂ ತೈಲ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದೇವೆ ‘ ಎಂದಿದ್ದಾರೆ.

‘ ಮಾತೆತ್ತಿದ್ದರೆ ಸರ್ಕಾರ ಬೀಳುತ್ತೆ ಬೀಳುತ್ತೆ ಅಂತ ಹೇಳ್ತಾನೆ ಬರ್ತಿದಾರೆ. ಎಲ್ರೀ ಸರ್ಕಾರ ಬೀಳುತ್ತೆ. ಮೈತ್ರಿ ಸರ್ಕಾ ಬೀಳೋದಿಲ್ಲ. ಐದು ವರ್ಷ ಆಡಳಿತ ನಡೆಸುತ್ತೆ ‘ ಎಂದು ಬಿಎಸ್ ವೈ ಗೆ ಸಚಿವ ಜಮೀರ್ ಅಹ್ಮದ್ ಟಾಂಗ್ ನೀಡಿದ್ದಾರೆ.

‘ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಘೋಷಣೆಯಾದ ಎಲ್ಲಾ ಯೋಜನೆಗಳು ಈ ಸರ್ಕಾರ ಮುಂದುವರೆಸುತ್ತೆ. ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಐದು ವರ್ಷ ಪೂರೈಸುತ್ತೆ ‘ ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com