‘ಹೆಬ್ಬಾಳಕರ್​, ಸತೀಶ ಜಾರಕಿಹೊಳಿ ಜಗಳ ಬೆಳಗಾವಿಯಿಂದ ಯುರೋಪ್​ವರೆ​ಗೂ ತಲುಪಿದೆ’ : ಶೆಟ್ಟರ್​ ವ್ಯಂಗ್ಯ

ಹುಬ್ಬಳ್ಳಿ : ಲಕ್ಷ್ಮೀ ಹೆಬ್ಬಾಳಕರ್ ಮತ್ತು ರಮೇಶ್ ಜಾರಕಿಹೋಳಿ ಜಗಳ ಬೆಳಗಾವಿಗೆ ಸೀಮಿತವಾಗಿಲ್ಲ. ಅವರ ಜಗಳದ ಬೆಂಕಿ ಬೆಂಗಳೂರು ಮಾತ್ರವಲ್ಲದೇ ಯುರೋಪ್‌ಗೂ ತಲುಪಿದೆ’ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಹುಬ್ಬಳ್ಳಿಯ ತಹಶೀಲ್ದಾರ ಕಚೇರಿ ಎದುರು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಗದೀಶ್​ ಶೆಟ್ಟರ್​, ‘ರಾಜ್ಯ ಸರ್ಕಾರದಲ್ಲಿ ಹೊಂದಾಣಿಕೆಯ ಕೊರತೆ ಇದೆ, ಲಕ್ಷ್ಮೀ ಹೆಬ್ಬಾಳಕರ್ ಮತ್ತು ರಮೇಶ್ ಜಾರಕಿಹೋಳಿ ಜಗಳ ಬೆಳಗಾವಿಗೆ ಮತ್ತು ಬೆಂಗಳೂರು ಮಾತ್ರವಲ್ಲದೇ ಯುರೋಪ್‌ಗೂ ತಲುಪುತ್ತದೆ.  ತಾವೇ ಕಚ್ಚಾಡಿಕೊಂಡು ಸರ್ಕಾರ ಬೀಳಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಭವಿಷ್ಯ ನುಡಿದರು.

lakshmi hebbalkar and jarkiholi ಗೆ ಚಿತ್ರದ ಫಲಿತಾಂಶ

‘ಉತ್ತರ ಕರ್ನಾಟಕಕ್ಕೆ ಸಿಎಂ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ. ಎಚ್.ಡಿ. ರೇವಣ್ಣ ಮತ್ತು ಕುಮಾರಸ್ವಾಮಿ ಸುಳ್ಳರ ಚಕ್ರವರ್ತಿಗಳು. ಆಡಳಿತ ನಡೆಸುವುದನ್ನು ಬಿಟ್ಟು ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಉತ್ತರ‌ ಕರ್ನಾಟಕದ ಯಾವುದೇ ದೇವಸ್ಥಾನಗಳಿಗೆ ಭೇಟಿ ಕೊಟ್ಟಿಲ್ಲ. ಸಿಎಂಗೆ ಉತ್ತರ ಕರ್ನಾಟಕದ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲಿದ್ದ ಮನೆ ಬೋರ್ಡ್ ಕಿತ್ತುಕೊಂಡು ಹೋಗಿದ್ದಾರೆ’ ಎಂದು ಸಿಎಂ ವಿರುದ್ಧ ಶೆಟ್ಟರ್​ ಕಿಡಿಕಾರಿದರು.

lakshmi hebbalkar and jarkiholi ಗೆ ಚಿತ್ರದ ಫಲಿತಾಂಶ

‘ಹಾಸನಕ್ಕೆ ಕೆಶಿಪ್ ಕಚೇರಿ ಸ್ಥಳಾಂತರಿಸಿರುವುದು ಖಂಡನೀಯ. ಪೆಟ್ರೋಲ್, ಡೀಜಲ್ ಬೆಲೆ ಏರಿದೆ ಎಂದು ಬಸ್ ಪ್ರಯಾಣ ದರ ಏರಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕು. ಇಂಧನ ದರ ಏರಿಕೆಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನರೇಂದ್ರ ಮೋದಿಯವರ ಗಮನದಲ್ಲಿದೆ, ಮೋದಿ ಬೆಲೆ ಇಳಿಕೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭರವಸೆಯಿದೆ’ ಎಂದು ಶೆಟ್ಟರ್​ ತಿಳಿಸಿದ್ರು.

Leave a Reply

Your email address will not be published.