‘ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿಯಾಗುವುದಿಲ್ಲ’ : ಮಾಜಿ ಪ್ರಧಾನಿ ದೇವೇಗೌಡ

ಹಾಸನ : ಅವಶ್ಯಕತೆ ಇರುವ ಕಡೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ, ಯಾವುದೇ ಕಾರಣಕ್ಕೆ ಬಿಜೆಪಿಯೊಂದಿಗೆ ಮೈತ್ರಿಯಾಗುವುದಿಲ್ಲವೆಂದು ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್​. ಡಿ. ದೇವೇಗೌಡರು ಹೇಳಿಕೆ ನೀಡಿದ್ರು.

‘ಹಾಸನದಲ್ಲಿ ಮಾತನಾಡಿದ ಮಾಜಿಪ್ರಧಾನಿ  ಹೆಚ್.ಡಿ.ದೇವೇಗೌಡ ಹೇಳಿಕೆ, ‘ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ, ಅವಶ್ಯಕತೆ ಇರುವ ಕಡೆ ಕಾಂಗ್ರೆಸ್​ ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಇನ್ನು ಲೋಕಸಭೆ ಚುನಾವಣೆಗೆ ಕ್ಷೇತ್ರಗಳ ಹಂಚಿಕೆ ಸಂಬಂಧದ ಚರ್ಚೆ ವಿಳಂಬವಾಗಲಿದೆ’ ಎಂದು ದೇವೇಗೌಡ್ರು ತಿಳಿಸಿದ್ರು.ಇನ್ನು ಸಿದ್ದರಾಮಯ್ಯ ವಿದೇಶ ಪ್ರವಾಸ ಸುಖಕರವಾಗಿಲಿ‌ ಎಂದು  ಹೆಚ್.ಡಿ.ಡಿ. ಹಾರೈಸಿದ್ರು.

ಸಂಬಂಧಿತ ಚಿತ್ರ

‘ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚಿನ ವಿಷಯ ಸುಪ್ರೀಂಕೋರ್ಟ್ ನಲ್ಲಿದೆ ನಾನು ಈ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ್ರು.  ಪೆಟ್ರೋಲ್, ಡಿಸೇಲ್ ಬೆಲೆ‌ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳಲಿದೆ, ಬೆಲೆ ನಿಯಂತ್ರಣ ಮಾಡದ ಕೇಂದ್ರ ಸರ್ಕಾರವನ್ನು ಖಂಡಿಸುತ್ತೇನೆ, ಆಡಳಿತದಲ್ಲಿ ಕೆಲವು ವೈಫಲ್ಯಗಳಿವೆ, ತೃತೀಯರಂಗದ ಬಗ್ಗೆ ಪ್ರಧಾನಮಂತ್ರಿ ಕೆಲವು ಭಾಷಣಗಳಲ್ಲಿ ಲಘುವಾಗಿ ಮಾತನಾಡುತ್ತಿದ್ದಾರೆ, ವಿದೇಶದಿಂದ ಕಪ್ಪು ಹಣ ತಂದು ಜನರಿಗೆ ಹಂಚುತ್ತೇನೆ ಎಂದು ಹೇಳಿದ್ದರು, ಘೋಷಣೆ ಮಾಡುವ ಮುನ್ನ ಯೋಚಿಸಿ ಹೇಳಿಕೆ ನೀಡಬೇಕು’ ಮೋದಿ ವಿರುದ್ದ ಅಸಮಾಧನ ವ್ಯಕ್ತಪಡಿಸಿದ್ರು.

modi and hdd ಗೆ ಚಿತ್ರದ ಫಲಿತಾಂಶ

‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಎಲ್ಲಾ ಶಾಸಕರು ಭಾಗವಹಿಸಿದ್ದು ಸಮಾಧಾನ ತಂದಿದೆ. ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಜಿಲ್ಲೆಯಲ್ಲಿ‌ ಆಗಿರುವ ನಷ್ಟದ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಗಿದೆ. ಅತಿವೃಷ್ಠಿಯಿಂದ ಕಾಫಿ, ಮೆಣಸು, ಭತ್ತ,‌ ಜೋಳ,‌ ರಾಗಿ ಹಾಗೂ ಇನ್ನಿತರೇ ಬೆಳೆಗಳು ನಾಶವಾಗಲಿದೆ. ಅಂಕಿ ಅಂಶಗಳೊಂದಿಗೆ ಶೀಘ್ರದಲ್ಲಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಮಾಡುತ್ತೇನೆ. ಮುಂದಿನ ದಿಶಾ ಸಭೆಯೊಳಗೆ ಎಲ್ಲಾ ಇಲಾಖೆಗಳು ಪ್ರಗತಿ ‌ಕಾಣಬೇಕು, ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವು ಇಲಾಖೆಗಳಿಗೆ ಹಣ ಬಿಡುಗಡೆ ಮಾಡದಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ’ ಎಂದು ಸಭೆಯಲ್ಲಿ ದೇವೇಗೌಡ್ರು ಹೇಳಿಕೆ ನೀಡಿದ್ರು.

Leave a Reply

Your email address will not be published.

Social Media Auto Publish Powered By : XYZScripts.com