ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಒಂದು ವರ್ಷ – ಸಮಾಧಿ ಬಳಿ ಗಣ್ಯರಿಂದ ಶೃದ್ಧಾಂಜಲಿ ಅರ್ಪಣೆ

ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ, ಬೆಳಿಗ್ಗೆ ಸಮಾಧಿ ಬಳಿ ಗಣ್ಯರು ಶೃದ್ಧಾಂಜಲಿ ಅರ್ಪಿಸಿದ್ದಾರೆ.

ಈ ವೇಳೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಸ್ವಾಮಿ ಅಗ್ನಿವೇಶ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಇಂದು ‘ಗೌರಿ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. ಗೌರಿ ಲಂಕೇಶ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಗುತ್ತಿದ್ದು, ರಾಜಭವನ ಚಲೋ ಹಾಗೂ ಅಬಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ ರಾಜಧಾನಿ ಬೆಂಗಳೂರಿನಲ್ಲಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹದ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಕೆ.ಎಲ್ ಅಶೋಕ್, ಎಮ್.ಎಸ್ ಆಶಾದೇವಿ, ನಟ ಪ್ರಕಾಶ್ ರೈ, ಜಿಗ್ನೇಶ್ ಮೇವಾನಿ, ಕನ್ಹಯ್ಯಾ ಕುಮಾರ್ ಆಗಮಿಸಲಿದ್ದಾರೆ.

 

ಕಾರ್ಯಕ್ರಮದಲ್ಲಿ ಎರಡು ಗೋಷ್ಠಿಗಳು ನಡೆಯಲಿವೆ. ಮೊದಲ ಗೋಷ್ಠಿಯಲ್ಲಿ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರ ಆಶಯ ನುಡಿ ಇರಲಿದೆ. ಉಮಾದೇವಿ ಕಲಬುರಗಿ, ಇಂದಿರಾ ಲಂಕೇಶ ಹಾಗೂ ಮೇಘನಾ ಪನ್ಸಾರೆ ಉಪಸ್ಥಿತರಿರಲಿದ್ದಾರೆ. ತೀಸ್ತಾ ಸೆಟಲ್ವಾಡ್ ಅಧ್ಯಕ್ಷತೆ ವಹಿಸಲಿದ್ದಾರೆ.

ಎರಡನೇ ಗೋಷ್ಟಿಯಲ್ಲಿ ಸಾಹಿತಿ ಗಿರೀಶ ಕಾರ್ನಾಡ, ಪ್ರೊ. ನರೇಂದ್ರ ನಾಯಕ, ಓಮರ್ ಖಾಲಿದ್ ಮಾತನಾಡಲಿದ್ದು, ಸ್ವಾಮಿ ಅಗ್ನಿವೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com