ಗ್ರಾಮ ಪೂರ್ತಿ ಕೋಳಿ ಮರಿ ನವಿಲ ನರ್ತನ : ಗರಿ ಬಿಚ್ಚಿ ನಾಟ್ಯವಾಡುತ್ತ ಜನರನ್ನು ರಂಜಿಸುವ ರಾಷ್ಟ್ರ ಪಕ್ಷಿ

ಚಿಕ್ಕಮಗಳೂರು :  ಅರಣ್ಯದಲ್ಲಿರಬೇಕಾದ ರಾಷ್ಟ್ರ ಪಕ್ಷಿ ನವಿಲು ನಾಡನ್ನೇ ಮನೆ ಮಾಡಿಕೊಂಡು ಸ್ವಚ್ಚಂದವಾಗಿ ಆಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದಿದೆ.‌

ಆದ್ರಲ್ಲೂ‌ ನವಿಲು ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ಇಡೀ ಗ್ರಾಮವನ್ನೆ ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದೆ. ಕಳೆದ‌ ಎರಡು ವರ್ಷದ ಹಿಂದೆ ಗ್ರಾಮದ ಸೋಮಶೇಖರ್ ಎಂಬುವರು ಕಾಡಿನಲ್ಲಿರುವ ಶ್ವಾನಗಳ ಬಾಯಿಗೆ ತುತ್ತಾಗುತ್ತಿದ್ದ ನವಿಲುಗಳ ಮೊಟ್ಟೆಯನ್ನು ತಂದು ತಮ್ಮ ಮನೆಯ ಕೋಳಿಯ ಮೊಟ್ಟೆಯ ಜೊತೆ ನವಿಲಿನ‌ ಮೊಟ್ಟೆ ಇಟ್ಟಿದ್ದರು ನಂತರ ಕೋಳಿ ನವಿಲು ಮರಿಗೆ ಜನ್ಮ ನೀಡಿತ್ತು.

ಇನ್ನು ನಾಡಿನ ಜನರೊಂದಿಗೆ ಬೆಳೆದ ನವಿಲು ಗ್ರಾಮದಲ್ಲೇ ತನ್ನ ಜೀವನ‌ ಮುಂದುವರೆಸಿದೆ. ರೆಕ್ಕೆ ಬಿಚ್ಚಿ ನಾಟ್ಯವಾಡುತ್ತ ಇಡೀ ಗ್ರಾಮವನ್ನು ರಂಜಿಸುತ್ತಿದ್ದು ಎಲ್ಲರ ಆಕರ್ಷಣೆಯಾಗಿದ್ದು, ಇಡೀ ಗ್ರಾಮದ ಜನ ನವಿಲು ನಾಟ್ಯವಾಡುತ್ತಿದ್ದರೆ ಸೆಲ್ಫಿ ತಗೆದುಕೊಂಡು ಎಂಜಾಯ್ ಮಾಡ್ತಾ ಇದ್ದಾರೆ. ಇನ್ನು ಎಷ್ಟೋ ಭಾರಿ ಸೋಮಶೇಖರ್ ನವಿಲನ್ನು ಕಾಡಿಗೆ ಬಿಟ್ಟು ಬಂದ್ರು, ಗ್ರಾಮವನ್ನು ತೊರೆಯದ ನವಿಲು ಮತ್ತೆ ವಾಪಾಸ್ ಗ್ರಾಮಕ್ಕೆ ತೆರಳುತ್ತಿರುವುದು ಎಲ್ಲರ ಆಶ್ಚರ್ಯ ಕ್ಕೆ ಕಾರಣವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com