Cricket : ಐಪಿಎಲ್ 2019 – RCB ತಂಡದ ಕೋಚ್ ಆಗಿ ಆಶಿಶ್ ನೆಹ್ರಾ ನೇಮಕ..

2019ರಲ್ಲಿ ನಡೆಯಲಿರುವ 12ನೇ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಅವರನ್ನು ಕೋಚ್ ಆಗಿ ನೇಮಿಸಿದೆ.

ಕಳೆದ ಸೀಸನ್ ನಲ್ಲಿ ಆರ್ಸೀಬಿ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಆಶಿಶ್ ನೆಹ್ರಾ ಇತ್ತೀಚೆಗೆ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಗ್ಯಾರಿ ಕರ್ಸ್ಟನ್ ಅವರೊಂದಿಗೆ ಸೇರಿ ಕೊಹ್ಲಿ ಪಡೆಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ ವಿಷಯವನ್ನು ಆರ್ಸೀಬಿ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಧೃಡಪಡಿಸಿದೆ.

2018ರಲ್ಲಿ ನಡೆದ 11ನೇ ಐಪಿಎಲ್ ಸೀಸನ್ ನಲ್ಲಿ ಆರ್ಸೀಬಿಯ ಮುಖ್ಯ ಕೋಚ್ ಆಗಿ ಡೇನಿಯಲ್ ವೆಟ್ಟೊರಿ, ಬ್ಯಾಟಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಹಾಗೂ ಆಶೀಶ್ ನೆಹ್ರಾ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

3 thoughts on “Cricket : ಐಪಿಎಲ್ 2019 – RCB ತಂಡದ ಕೋಚ್ ಆಗಿ ಆಶಿಶ್ ನೆಹ್ರಾ ನೇಮಕ..

Leave a Reply

Your email address will not be published.

Social Media Auto Publish Powered By : XYZScripts.com