ಮಗು ಮೂತ್ರ ಮಾಡಿದ್ದಕ್ಕೆ ಬರೆ ಇಟ್ಟ ಅಂಗನವಾಡಿ ಆಯಾ : ಮೈಸೂರಿನಲ್ಲೊಂದು ಹೀನ ಕೃತ್ಯ..!

ಮೈಸೂರು : ಅಂಗನವಾಡಿಯಲ್ಲಿ ಪುಟ್ಟ ಮಗುವೊಂದು ಮೂತ್ರ ಮಾಡಿತ್ತು, ಇದರಿಂದ ಕೋಪಗೊಂಡ ಆಯಾ ನೀಲಮ್ಮ ಗ್ಯಾಸ್ ಸ್ಟೌವ್‍ನಲ್ಲಿ ಚಾಕು ಕಾಯಿಸಿ ಮಗುವಿನ ಕಾಲಿಗೆ ಬರೆ ಹಾಕಿರುವ  ಅಮಾನವೀಯ ಘಟನೆ ಮೈಸೂರಿನ ದೇವಯ್ಯನ ಹುಂಡಿಯಲ್ಲಿ ನಡೆದಿದೆ.

ಮೂರು ವರ್ಷದ ಮಗುವಿಗೆ ಬರ ಹಾಕಿ ಆಯಾ ನೀಲಮ್ಮ ಈ ಹೀನಕೃತ್ಯ ನಡೆಸಿದ್ದಾರೆ. ಅಂಗನವಾಡಿ ಆಯಾ ನೀಲಮ್ಮ ಈ ದೃಷ್ಕೃತ್ಯದಿಂದ ಮಗುವಿನ ಪೋಷಕರು ಹಾಗೂ ಗ್ರಾಮಸ್ಥರು ಅಂಗನವಾಡಿ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪದೇಪದೇ ಇದೇ ರೀತಿ ಆಗ್ತಿದೆ ನೀಲಮ್ಮ ಈ ಕೂಡಲೇ ಕೆಲಸ ಬಿಟ್ಟು ಹೋಗ್ಬೇಕು, ನೀಲಮ್ಮಗೆ ಶಿಕ್ಷೆಯಾಗಬೇಕು ನಮ್ಮ ಮಕ್ಕಳಿಗೆ ರಕ್ಷಣೆ ಕೊಡಿ ಎಂದು ದೇವಯ್ಯನಹುಂಡಿ ಅಂಗನವಾಡಿ ಬಳಿ ಪೋಷಕರು ಹಾಗೂ ಸಾರ್ವಜನಿಕರು ಜಮಾಯಿಸಿ, ಅಧಿಕಾರಿಗಳು ನಮ್ಮ ಮಕ್ಕಳಿಗೆ ಸೂಕ್ತವಾದ ಕಲಿಕಾ ಕೇಂದ್ರ ಕಲ್ಪಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Leave a Reply

Your email address will not be published.