ಸೋಷಿಯಲ್​ ಮೀಡಿಯಾಗೆ ಗುಡ್​ ಬೈ ಹೇಳಿದ ರಕ್ಷಿತ್​ ಶೆಟ್ಟಿ…! ಕಾರಣ ಏನು…?

ಬೆಂಗಳೂರು : ಇತ್ತಿಚೀನ ದಿನಗಳಲ್ಲಿ ಜನರಿಗೆ ಒಂದು ಹೊತ್ತು ಊಟ ಇಲ್ಲದಿದ್ದರೂ ಇರುತ್ತಾರೆ. ಆದರೆ ಸಾಮಾಜಿಕ ಜಾಲತಾಣವನ್ನು ನೋಡದೇ ಇರಲು ಜನರಿಗೆ ಆಗುವುದಿಲ್ಲ. ಅದರಲ್ಲೂ ಸೆಲಬ್ರೆಟಿಗಳು ಈ ಟ್ವಿಟ್ಟರ್​, ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್ ಗಳಿಂದ ತಮ್ಮ ಅಭಿಮಾನಿಗಳನ್ನು ಸಂಪಾದನೆ ಮಾಡುತ್ತಿದ್ದರೇ ಎಂದರೂ ತಪ್ಪಾಗುವುದಿಲ್ಲ. ಆದರೆ ನಮ್ಮ ಕಿರಿಕ್​ ಪಾರ್ಟಿ ರಕ್ಷಿತ್​ ತಮ್ಮ  ಫೇಸ್​ಬುಕ್​, ಟ್ವಿಟರ್​,  ಇನ್​ಸ್ಟಾಗ್ರಾಂಗೆಲ್ಲಾ ಗುಡ್​ ಬೈ ಹೇಳಿದ್ದಾರೆ.

rakshith shetty ಗೆ ಚಿತ್ರದ ಫಲಿತಾಂಶ

ಹೌದು  ರಕ್ಷಿತ್​  ಶೆಟ್ಟಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿನ ಎಲ್ಲಾ ಅಕೌಂಟ್​ಗಳನ್ನು ಡಿಆ್ಯಕ್ಟಿವೇಟ್​ ಮಾಡಿದ್ದಾರೆ.  ಮೊದಲಿನಿಂದಲೂ ಸೃಜನಶೀಲ ನಟ, ನಿರ್ದೇಶಕ ನಿರ್ಮಾಪಕನೆಂದು ಗುರುತಿಸಿಕೊಂಡಿರುವ ರಕ್ಷಿತ್​, ಸೋಷಿಯಲ್ ಮೀಡಿಯಾದ  ಮೂಲಕ ತಮ್ಮ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅಭಿಮಾನಿಗಳ ಜತೆ ಸಂಭಾಷಣೆ ನಡೆಸುತ್ತಿದ್ದರು. ಆದರೆ, ಈಗ ಸೋಷಿಯಲ್ ಮೀಡಿಯಾದಿಂದ ಹೊರ ನಡೆದಿದ್ದಾರೆ. ತಮ್ಮ ಟ್ವಿಟ್ಟರ್​, ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ ಅಕೌಂಟ್​ಗಳನ್ನು ಡಿಆ್ಯಕ್ಟಿವ್ ಮಾಡಿ, ಹೊರ ನಡೆದಿದ್ದಕ್ಕೆ ಇನ್ನೂ  ನಿಖರ ಮಾಹಿತಿ ತಿಳಿದುಬಂದಿಲ್ಲ.

ರಕ್ಷಿತ್ ಸಾಮಾಜಿಕ ಜಾಲತಾಣದಿಂದ ಹೊರಬರುವ ಮೊದಲು ಈ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ರು​, ‘ನಾನು ಸಾಮಾಜಿಕ ಜಾಲತಾಣಗಳಿಂದ ಹೊರ ನಡೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ನನಗೆ ನೀವು ಅತ್ಯಧಿಕ ಪ್ರೀತಿ ತೋರಿಸಿದ್ದೀರಿ. ಅದಕ್ಕೆ ನನ್ನ ಧನ್ಯವಾದ. ಲವ್ ಯು ಆಲ್” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ರು. ಇನ್ನು ಸೋಷಿಯಲ್​ ಮಿಡೀಯಾಗೆ ವಿದಾಯ ಹೇಳಿದಕ್ಕೆ ಕಾರಣವನ್ನು ರಕ್ಷಿತ್​ ತಿಳಿಸಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com