ಶಿವಮೊಗ್ಗ : ಜಿ.ಪಂ ಸದಸ್ಯನಿಂದ ರೈಲ್ವೆ ಸಿಬ್ಬಂದಿ ಮೇಲೆ ಹಲ್ಲೆ : ವಿಡಿಯೋ ವೈರಲ್

ಶಿವಮೊಗ್ಗ : ಬಿಜೆಪಿ ಜಿ.ಪಂ.ಸದಸ್ಯ ಸುರೇಶ್ ಸ್ವಾಮಿರಾವ್ ರೈಲ್ವೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಹೋಬಳೋದಲ್ಲಿ ತಡರಾತ್ರಿ ನಡೆದಿದ್ದು, ಗೂಂಡಾಗಿರಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್  ಆಗಿದೆ.

ಮೈಸೂರು ತಾಳಗುಪ್ಪ ರೈಲು ತಾಳಗುಪ್ಪದತ್ತ ತೆರಳುತ್ತಿದ್ದಾಗ ಸೂಡೂರು ಕ್ರಾಸಿಂಗ್ ನಲ್ಲಿ ಗೇಟ್ ಹಾಕಲಾಗಿತ್ತು. ಈ ವೇಳೆ ಶಿವಮೊಗ್ಗ ಕಡೆಯಿಂದ ಕಾರಿನಲ್ಲಿ ಬಂದ ಜಿಪಂ ಸದಸ್ಯ, ‘ನಾನು ಬಂದಾಗ ಗೇಟ್ ಹಾಕಿದಿಯೇನೋ..’ ಎಂದು ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜಿ. ಪಂ ಸದಸ್ಯ ಪಾನಮತ್ತರಾಗಿದ್ದರು ಎನ್ನಲಾಗಿದ್ದು, ಹಲ್ಲೆ ನಡೆಸಿದ್ದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಹಲ್ಲೆಗೊಳಗಾದ ಸಿಬ್ಬಂದಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ, ಆದರೆ ವೈದ್ಯರ ಒತ್ತಡದ ಹಿನ್ನೆಲೆಯಲ್ಲಿ ನೋವಿನಿಂದ ಆತ ನರಳುತ್ತಿದ್ದರೂ ಡಿಸ್ಚಾರ್ಜ್ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.ಈ ಘಟನೆಗೆ ಸಂಬಂಧ ಪಟ್ಟಂತೆ ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com