ರಾಯಚೂರು : ಹಿರಿಯ ನಟ ದೊಡ್ಡಣ್ಣ ತೀವ್ರ ಅಸ್ವಸ್ಥ : ಆಸ್ಪತ್ರೆಗೆ ದಾಖಲು…!

ರಾಯಚೂರು : ಚಿತ್ರನಟ ದೊಡ್ಡಣ್ಣ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು ರಾಯಚೂರಿನ ಶಕ್ತಿನಗರದ RTPS ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಯಚೂರು ತಾಲೂಕಿನ ದೇವಸುಗೂರಿನ ಗ್ರಾಮದಲ್ಲಿರುವ ಸೂಗೂರೇಶ್ವರ ದೇವಸ್ಥಾನದಲ್ಲಿ ಇಂದು ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆಂದು ಬಂದಿದ್ದ ನಟ ದೊಡಣ್ಣ  ವಸತಿ ಗೃಹದಲ್ಲಿ ಕುಟುಂಬಸ್ಥರ ಜತೆ ವಾಸ್ತವ್ಯ ಮಾಡಿದ್ರು, ಈ ವೇಳೆಯಲ್ಲಿ ವಸತಿ ಗೃಹದ ಬಾತ್ ರೂಮ್ ನಲ್ಲಿ  ದೊಡ್ಡಣ್ಣ ಕುಸಿದುಬಿದ್ದರು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ದೇವಸ್ಥಾನದ ವಸತಿ ಗೃಹದಲ್ಲಿರುವ ಬಾತ್​ ರೋಮ​ನಲ್ಲಿ ಲೋ ಬಿಪಿಯಾಗಿ ಅಸ್ವಸ್ಥಗೊಂಡು ಕುಸಿದಿದ್ದಾರೆ. ತಕ್ಷಣವೇ ಕುಟುಂಬಸ್ಥರು ದೊಡ್ಡಣ್ಣರನ್ನು ಆಸ್ಪತ್ರೆಗೆ ದಾಖಲಿಸಿದ್ರು. ವೈದ್ಯರ ಚಿಕಿತ್ಸೆ ನೀಡುತ್ತಿದ್ದರೂ ದೊಡ್ಡಣ್ಣರ  ಆರೋಗ್ಯ ಏರುಪೇರಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್​ ಮೂಲಕ ಬೆಂಗಳೂರಿಗೆ ಕರೆತರುತ್ತಿದ್ದಾರೆ.

Leave a Reply

Your email address will not be published.