ಹಾಸನ : ಚುನಾವಣೆ ಸೋಲಿನ ವಿಚಾರಕ್ಕೆ ನಡುಬೀದಿಯಲ್ಲಿ ಸೋತ ಅಭ್ಯರ್ಥಿಗಳ ಮಾರಾಮಾರಿ..!

ಹಾಸನ  : ಚುನಾವಣೆ ಸೋಲಿನ ವಿಚಾರದಲ್ಲಿ ಸೋತ ಅಭ್ಯರ್ಥಿಗಳಿಂದ ಮಾರಾಮಾರಿಯಾಗಿರುವ ಘಟನೆ ಹಾಸನ ನಗರದ ಸಂತೆಪೇಟೆ ಬಳಿ ನಡೆದಿದೆ. ನಡು ರಸ್ತೆಯಲ್ಲಿ ಪರಾಜಿತ ಅಭ್ಯರ್ಥಿಗಳ ಕಾಳಗ ನಡೆದಿದೆ.

ತಮ್ಮ ಸೋಲಿಗೆ ಪಕ್ಷೇತರ ಅಭ್ಯರ್ಥಿಯೇ ಕಾರಣ ಎಂದು ಕಾಂಗ್ರೆಸ್ ಅಭ್ಯರ್ಥಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಾಸನ ನಗರಸಭೆಯ 32ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಇರ್ಫಾನ್ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಎದುರಾಗಿದೆ.

ಇದೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿ ಉಮೇರ್ ಹಾಗೂ ಅವರ ಸಂಬಂಧಿ ರಿಯಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

One thought on “ಹಾಸನ : ಚುನಾವಣೆ ಸೋಲಿನ ವಿಚಾರಕ್ಕೆ ನಡುಬೀದಿಯಲ್ಲಿ ಸೋತ ಅಭ್ಯರ್ಥಿಗಳ ಮಾರಾಮಾರಿ..!

  • September 4, 2018 at 4:00 PM
    Permalink

    Be careful gas owner

    Reply

Leave a Reply

Your email address will not be published.

Social Media Auto Publish Powered By : XYZScripts.com